ನಟಿ ಸಿಂಧೂ ಮೆನನ್‌ ಕುಟುಂಬದ ವಿರುದ್ದ ದಾಖಲಾಯ್ತು ಮತ್ತೊಂದು FIR : ಕಾರಣವೇನು..?

ಬೆಂಗಳೂರು : ಬ್ಯಾಂಕ್‌ಗೆ ವಂಚಿಸಿದ ಪ್ರಕರಣ ಸಂಬಂಧ ಈಗಾಗಲೆ ನಟಿ ಸಿಂಧೂ ಮೆನನ್‌ ಕುಟುಂಬದ ವಿರುದ್ದ ಎಫ್‌ಐಆರ್‌ ದಾಖಲಾಗಿದ್ದು, ಈಗ  ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಚೇರಿಗೆ ಕಟ್ಟಡವನ್ನು ಬಾಡಿಗೆಗೆ ಪಡೆದು ವಂಚನೆ ಎಸಗಿರುವ ಆರೋಪದ ಮೇಲೆ ಸಿಂಧೂ, ಸಹೋದರ ಮನೋಜ್‌ ಕಾರ್ತಿಕ್‌, ಸುಧಾ ರಾಜಶೇಖರ್‌ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಿಂಧೂ ಮೆನನ್‌ ಸಹೋದರ ಮನೋಜ್ ಕಟ್ಟಡದ ದಾಖಲೆಗಳನ್ನು ನಕಲು ಮಾಡಿ ಬ್ಯಾಂಕ್‌ನಲ್ಲಿ ಲೋನ್‌ ಮಾಡಿಸಿದ್ದ. ಕಚೇರಿ ಪ್ರಾರಂಭಿಸಲು ಕಮರ್ಷಿಯಲ್‌ ಜಾಗ ಬೇಕುಎಂಜು ಗಣೇಶ್ ರಾವ್‌ ಎಂಬುವವರನ್ನು ಸಂಪರ್ಕ ಮಾಡಿದ್ದ. ಬಳಿಕ ಗಣೇಶ್‌ ಅವರಿಂದ ಪ್ಯಾನ್‌ ಕಾರ್ಡ್‌,ಆಧಾರ್‌ ಕಾರ್ಡ್‌ ಹಾಗೂ ಕಟ್ಟಡದ ದಾಖಲೆಗಳನ್ನು ಪಡೆದಿದ್ದ. ಬಾಡಿಗೆ ಕಟ್ಟಡ ಪಡೆದು ಲೋನ್‌ ಶ್ಯೂರಿಟಿಗೆ ಗಣೇಶ್ ರಾವ್‌ ಹೆಸರನ್ನು ಹಾಕಿದ್ದ ಎಂದು ತಿಳಿದುಬಂದಿದ್ದು, ಈಗ ಗಣೇಶ್‌ ರಾವ್‌ ಸಿಂಧೂ ಮೆನನ್‌ ಸಹೋದರ ಸೇರಿದಂತೆ ಅವರ ಕುಟುಂಬದ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com