BJP ತೊರೆಯುತ್ತಾರಾ ಸಂಕೇಶ್ವರ್ ? ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದ ಮಾಜಿ ಸಂಸದ

ಹುಬ್ಬಳ್ಳಿ : ರಾಜ್ಯಸಭೆಗೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆಯುತ್ತಾರೆ ಎಂಬ ಊಹಾಪೋಹಗಳಿಗೆ ಮಾಜಿ ಸಂಸದ ವಿಜಯ್‌ ಸಂಕೇಶ್ವರ್‌ ತೆರೆ ಎಳೆದಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಸಭಾ ಸ್ಥಾನಕ್ಕೆ ನಾನು ಸ್ಪರ್ಧೆ ಬಯಸಿದ್ದೆ. ಆದರೆ ಟಿಕೆಟ್‌ ಸಿಗದಿದ್ದಕ್ಕೆ ನನಗೆ ಬೇಸರವಿಲ್ಲ. ನಾನು 36 ವರ್ಷದಿಂದ ಆರ್‌ಎಸ್ಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ನಾನಾಗಿಯೇ ಯಾವುದೇ ಹುದ್ದೆ, ಸ್ಥಾನಮಾನವನ್ನು ಬಯಸಿದವನಲ್ಲ. ಇಲ್ಲಿ ಕನ್ನಡಿಗರು ಹಾಗೂ ಕನ್ನಡೇತರರ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.

ಅಲ್ಲದೆ ಮೋದಿ ಅವರ ಕುರಿತು ಮಾತನಾಡಿದ ಸಂಕೇಶ್ವರ್‌, ಮೋದಿಯವರ ನಿಲುವು ಅದ್ಭುತವಾಗಿದೆ. ಮೋದಿ ಎಲ್ಲ ಜಾತಿ, ಜನಾಂಗಕ್ಕೂ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಹುನ್ನಾರದಿಂದ ಹಲವು ವದಂತಿಗಳು ಹರಿದಾಡುತ್ತಿವೆ ಅಷ್ಟೇ. 365 ದಿನಗಳೂ ನಾನು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಆಕಾಂಕ್ಷಿಯಾಗಿ ರಾಜ್ಯಸಭೆ ಸ್ಥಾನಕ್ಕೆ ಅರ್ಜಿ ಹಾಕಿಲ್ಲ.ಮುಂದಿನ ಚುನಾವಣೆಯಲ್ಲಿ ಬಿಎಸ್ ವೈಯವರನ್ನ ಗೆಲ್ಲಿಸಬೇಕು ಅಷ್ಟೇ ಎಂದಿದ್ದಾರೆ.

ಕೆಲಸ ಮಾಡಬೇಕು. ಆದರೆ ಯಾವುದೇ ಅಪೇಕ್ಷೆ ಇರಬಾರದು ಎಂದು ನನಗೆ ಪಕ್ಷ ಕಲಿಸಿದೆ. ಬಿಜೆಪಿಯಿಂದ ನನಗೆ ಲೋಕಸಭೆ ಚುನಾವಣೆಗೆ ಮೂರು ಬಾರಿ ಅವಕಾಶ ಸಿಕ್ಕಿತ್ತು.ನಾನು ಲಿಂಗಾಯತ ಪ್ರಭಾವಿ ಮುಖಂಡ ಅಂತಾ ಹೇಳಿಕೊಳ್ಳಲ್ಲ. ಕಳೆದ 30 ವರ್ಷಗಳಿಂದ ನಾನು ಬಿಜೆಪಿ ಸದಸ್ಯ. ರಾಜೀವ್ ಚಂದ್ರಶೇಖರ್ ಬಿಜೆಪಿ ಸೇವಕರಾಗಿದ್ದಾರೆ. ನಾನು ವಿಧಾನಸಭೆಗೆ ಸ್ಪರ್ಧೆಯ ವಿಚಾರ ಪಕ್ಷಕ್ಕೆ ಬಿಟ್ಟಿದ್ದು ಎಂದಿದ್ದಾರೆ.

Leave a Reply

Your email address will not be published.