ನಾವು ಕೂಲಿ ಮಾಡಿದ್ದೇವೆ ಸಂಬಳ ಕೇಳಲು ನಿಮ್ಮ ಬಳಿ ಬರ್ತಿದ್ದೇವೆ, ಆಶಿರ್ವದಿಸಿ : ಸಿದ್ಧರಾಮಯ್ಯ

ಹಾವೇರಿ : ಅಸುಂಡಿ ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಶಂಕುಸ್ಥಾಪನೆಯಾಗಿದೆ. ಹಾವೇರಿಯ ಜನರ ಪಾಲಿಗೆ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೂಲಿ ಮಾಡಿದ್ದೇವೆ. ಸಂಬಳ ಕೇಳಲು ನಿಮ್ಮ ಬಳಿ ಬರುತ್ತಿದ್ದೇವೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಆರ್ಶಿವಾದ ಮಾಡಿ. ಯಡಿಯೂರಪ್ಪ ಸುಳ್ಳು ಹೇಳಿ ಮತ ಕೇಳಲು ಬರ್ತಾರೆ. ಬಿಜೆಪಿ ನಾಯಕರು ನಾಟಕ ಮಾಡ್ತಾರೆ ಅವರ ಮಾತು ನಂಬಬೇಡಿ. ಯಡಿಯೂರಪ್ಪ ಕೊಟ್ಟ ಕುದುರೆಯನ್ನು ಏರದಾತ. ಆತ ವೀರನು ಅಲ್ಲ ಶೂರನೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ 165 ಭರವಸೆಯಲ್ಲಿ 158 ಭರವಸೆಯನ್ನು ಈಡೇರಿಸಿದ್ದೇವೆ. ಎಲ್ಲ ವರ್ಗದ ಜನರೂ ನೆಮ್ಮದಿಯಿಂದ ಇರುವಂತೆ ಮಾಡಿದೆ ನಮ್ಮ ಸರ್ಕಾರ. ಇಂಥಾ ಸರ್ಕಾರವನ್ನು ಭ್ರಷ್ಟ ಸರ್ಕಾರ ಅಂತಾರೇ ಬಿಜೆಪಿ ನಾಯಕರು. ನಾಚಿಕೆಯಾಗ ಬೇಕು ಬಿಜೆಪಿ ನಾಯಕರಿಗೆ. ತಮ್ಮ ಅವದಿಯಲ್ಲಿ ಜೈಲ್ ಪೇರೆಡ್ ಮಾಡಿದ್ದಾರೆ.ರಾಜ್ಯ ಲೋಟಿ ಹೊಡೆದವರು ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com