ಅಡ್ವಾಣಿಯನ್ನು ಭೇಟಿಯಾದ ರಾ.ಗಾ : ಕಾಂಗ್ರೆಸ್‌ ಅಧ್ಯಕ್ಷರ ಬಳಿ BJP ಭೀಷ್ಮ ಹೇಳಿದ್ದೇನು ?

ದೆಹಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ ಆಡ್ವಾಣಿಯವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿರುವುದಾಗಿ ತಿಳಿದುಬಂದಿದೆ.

ಸದನ ಆರಂಭಕ್ಕೂ 10 ನಿಮಿಷ ಮುಂಚೆ ರಾಹುಲ್‌ ಗಾಂಧಿ ಆಗಮಿಸಿದ್ದು, ಒಂಟಿಯಾಗಿ ಕುಳಿತಿದ್ದ ಅಡ್ವಾಣಿಯವರ ಬಳಿ ತೆರಳಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇದಕ್ಕೆ ಅಡ್ವಾಣಿ ನಗುತ್ತಲೇ ನಾನು ಚೆನ್ನಾಗಿದ್ದೇನೆ, ಆದರೆ ಸದನ ನಡೆಯುತ್ತಿಲ್ಲ. ವಿಪಕ್ಷಗಳಾಗಲಿ ಸ್ಪೀಕರ್‌ ಆಗಲಿ, ಪ್ರಧಾನಿಯಾಗಲಿ ಈ ಬಿಕ್ಕಟ್ಟನ್ನು ಪರಿಹರಿಸುತ್ತಿಲ್ಲ. ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ನೋಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು  ವರದಿ ಮಾಡಿವೆ.

ಈ ಹಿಂದೆ ಸಹ ಅನೇಕ ಬಾರಿ ರಾಹುಲ್‌ ಗಾಂಧಿ ಅಡ್ವಾಣಿ ಅವರ ಜೊತೆ ಮಾತನಾಡಿದ್ದರು. ಸಂಸತ್‌ ಮೇಲೆ ಉಗ್ರರ ದಾಳಿಯ ಕಹಿ ನೆನಪಿಗಾಗಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್‌, ಅಡ್ವಾಣಿಯವರ ಕೈ ಹಿಡಿದು ಕೂರಲು ಸಹಾಯ ಮಾಡಿದ್ದರು.

ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ, ತ್ರಿಪುರಾದಲ್ಲಿ ನಡೆದ ಕಾರ್ಯಕ್ರಮದ ವೇಳೆ ಅಡ್ವಾಣಿಯವರನ್ನು ಹೊರತು ಪಡಿಸಿ ಮತ್ತೆಲ್ಲರಿಗೂ ನಮಸ್ಕರಿಸಿದ್ದು, ಅಡ್ವಾಣಿಯವರಿಗೆ ಅವಮಾನವೆಸಗಿದ್ದರು ಎಂದು ಚರ್ಚೆ ನಡೆದಿತ್ತು. ಇಂತಹ ಸಂದರ್ಭದಲ್ಲೇ ರಾಹುಲ್‌ ಗಾಂಧಿ ಅಡ್ವಾಣಿಯವರನ್ನ ಭೇಟಿಯಾಗಿರುವುದು ಮಹತ್ವ ಪಡೆದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com