ಹಿಂದೂ ವ್ಯಕ್ತಿಯ ಹೆಣ ಸಾಗಿಸಲು ಹಣ ಹೊಂದಿಸಿ ಮಾನವೀಯತೆ ಮೆರೆದ ಮುಸ್ಲಿಂ ಬಾಂಧವರು

ದಾವಣಗೆರೆ : ಐಸ್ ಕ್ರೀಮ್ ಮಾರುತ್ತಿದ್ದ ವ್ಯಕ್ತಿಯೊಬ್ಬನ ಸಾವಿನಲ್ಲಿ ಜಾತಿ ಮತ ಮೀರಿ ಮಾನವೀಯತೆ ಮೆರೆದ ಪ್ರಸಂಗ ದಾವಣಗೆರೆ ನಗರದಲ್ಲಿ ನಡೆದಿದೆ‌.

ಐಸ್ ಕ್ರೀಮ್ ಮಾಡುತ್ತಾ ದಾವಣಗೆರೆಯಲ್ಲಿ ನೆಲೆಸಿದ್ದ ಉತ್ತರ ಪ್ರದೇಶದ ರಾಮ್ ಶಕ್ತಿ ಎಂಬ ವ್ಯಕ್ತಿ ಮೃತಪಟ್ಟ ಹಿನ್ನಲೆ ಶವವನ್ನು ಸ್ವಗ್ರಾಮಕ್ಕೆ ರವಾನಿಸಲು ಮಸ್ಲಿಂ ಬಾಂಧವರು ಕೈ ಜೋಡಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬಳಿ ಇದ್ದ ಹಣವನ್ನು ಹೊಂದಿಸಿ ಶವವನ್ನು ಉತ್ತರ ಪ್ರದೇಶಕ್ಕೆ ರವಾನಿಸುವುದರ ಮೂಲಕ ಮಾನವಿಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದಹರದೋಯಿ ಜಿಲ್ಲೆ ರಸೂಲ್ ಬ್ರಹ್ಮಗ್ರಾಮದ ಶಕ್ತಿರಾಮ್ ಕಳೆದ ಹಲವಾರು ವರ್ಷಗಳಿಂದ ಭಾಷಾ ನಗರದ ದ್ವಾರ ಬಾಗಿಲ ಬಳಿ ಐಸ್ ಕ್ರೀಮ್ ಗಾಡಿ ಇಟ್ಡುಕೊಂಡು ಜೀವನ ಮಾಡುತ್ತಿದ್ದ. ಆದರೆ ರಾತ್ರಿ ಆಕಸ್ಮಿಕವಾಗಿ ಶಕ್ತಿರಾಮ್ ಮೃತಪಟ್ಟಿದ್ದಾನೆ. ಇದರಿಂದ ಸಂಬಂಧಿಕರನ್ನು ಸಂಪರ್ಕಿಸಿ ಸ್ಥಳೀಯರು ಮಾನವಿಯತೆ ಮೆರೆದಿದ್ದಾರೆ. 73 ಸಾವಿರ ಹಣವನ್ನು ಹೊಂದಿಸಿ ಆಂಬುಲೆನ್ಸ್ ವೆಚ್ಚ ಭರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com