T20-Cricket : ಹಿಟ್ ವಿಕೆಟ್ ಔಟಾಗಿ ಬೇಡದ ದಾಖಲೆ ಬರೆದ ಕೆ.ಎಲ್ ರಾಹುಲ್..!

ಕೋಲಂಬೋದಲ್ಲಿ ಸೋಮವಾರ ನಡೆದ ನಿದಾಹಾಸ್ ಟಿ20 ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ ಗಳಿಸಿತು. ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಬಲಗೈ ಬ್ಯಾಟ್ಸಮನ್ ಕೆ.ಎಲ್ ರಾಹುಲ್ ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Image result for k l rahul hit wicket

ಭಾರತದ ಚೇಸಿಂಗ್ ಮಾಡುತ್ತಿದ್ದಾಗ 18 ರನ್ ಗಳಿಸಿ ಆಡುತ್ತಿದ್ದ ಕೆ .ಎಲ್ ರಾಹುಲ್ 10ನೇ ಓವರ್ ನಲ್ಲಿ ಮೆಂಡಿಸ್ ಎಸೆತದಲ್ಲಿ ಹಿಟ್ ವಿಕೆಟ್ ಆಗಿ ಔಟಾದರು. ಈ ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಔಟಾದ ಭಾರತದ ಮೊದಲ ಬ್ಯಾಟ್ಸಮನ್ ಎಂಬ ಬೇಡದ ದಾಖಲೆಯನ್ನು ರಾಹುಲ್ ನಿರ್ಮಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com