ಶಿವರಾಜ್‌ ಕುಮಾರ್‌ ಮೇಲೆಯೇ ಗರಂ ಆದ BIGG BOSS ಸ್ಪರ್ಧಿ : ವಿಡಿಯೋ ವೈರಲ್‌ !

ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಕೊಂಡೇ ಸುದ್ದಿಯಾಗುತ್ತಿದ್ದ ಬಿಗ್‌ಬಾಸ್‌ ಸ್ಪರ್ಧಿಯೊಬ್ಬರು ಈಗ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್ ವಿರುದ್ದ ಗರಂ ಆಗಿದ್ದಾರೆ. ಹೌದು  ಶಿವರಾಜ್‌ ಕುಮಾರ್‌ ವಿರುದ್ದ ಸುದ್ದಿಯಾಗಿರುವುದು ಮತ್ಯಾರೂ ಅಲ್ಲ ಹುಚ್ಚ ವೆಂಕಟ್‌.

ಇತ್ತೀಚೆಗಷ್ಟೇ ಹುಚ್ಚ ವೆಂಕಟ್ ಶಿವರಾಜ್‌ ಕುಮಾರ್ ಅವರ ಕಾರ್ ಡ್ರೈವರ್‌ ನಂಬರ್ ಪಡೆದು ಕರೆ ಮಾಡಿದ್ದರಂತೆ. ಆದರೆ ಶಿವಣ್ಣ ಪಕ್ಕದಲ್ಲೇ ಇದ್ದರೂ ಮಾತನಾಡದೆ ಆಮೇಲೆ ಕರೆ ಮಾಡುತ್ತೇನೆ ಎಂದಿದ್ದರಂತೆ. ಆದರೆ ನನ್ನನ್ನು ಶಿವರಾಜ್‌ ಕುಮಾರ್ ಈ ರೀತಿ ನಡೆಸಿಕೊಳ್ಳುತ್ತಾರೆ ಎಂದು ಗೊತ್ತಿರಲಿಲ್ಲ. ಇದರಿಂದ ನನಗೆ ಬಹಳ ನೋವಾಗಿದೆ. ವಿಷ್ಣುವರ್ಧನ್‌ ಬಳಿಕ ಮತ್ತೊಬ್ಬ ನಟನನ್ನು ನಾನು ನೋಡಲು ಬಯಸಿದ್ದೆ. ಆದರೆ ನನ್ನ ಪ್ರೀತಿಗೆ ಶಿವರಾಜ್‌ ಕುಮಾರ್ ಯೋಗ್ಯ ಅಲ್ಲ ಎಂದಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

 

Leave a Reply

Your email address will not be published.