ಕಾಂಗ್ರೆಸ್‌, ಬಿಜೆಪಿಯವರಿಗೆ ಬೇಕಾದಷ್ಟು ಬಯ್ಯಬಹುದು, ಆದರೆ ಜನರಿಗೆ ಪ್ರಯೋಜನವಾಗಲ್ಲ : HDK

ರಾಯಚೂರು : ಜೆಡಿಎಸ್‌ನ ವಿಕಾಸಪರ್ವ ಯಾತ್ರೆ ರಾಯಚೂರಿಗೆ ತಲುಪಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದಾರೆ.

ಒಂದು ಕಡೆ ಬಿಜೆಪಿ ಪ್ರಧಾನಿ ಒಳಗೊಂಡಂತೆ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನಿಂದ ರಾಹುಲ್, ಸಿಎಂ ಬಂದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಪರಸ್ಪರ ಕೆಸರು ಎರಚಾಟಕ್ಕಷ್ಟೇ ಬಳಸಿಕೊಳ್ತಿದ್ದಾರೆ. ಎರಡೂ ಪಕ್ಷಗಳು ಸಮಸ್ಯೆಗಳ ಪರಿಹಾರದ ಬಗ್ಗೆ ಕಾರ್ಯಕ್ರಮಗಳಲ್ಲಿ ಮಾತನಾಡುತ್ತಿಲ್ಲ. ಬಿಜೆಪಿ ಅವರು ಅಧಿಕಾರ ಕೊಟ್ರೆ ಸಿದ್ದರಾಮಯ್ಯನವರನ್ನ ಜೈಲಿಗೆ ಕಳುಸ್ತೀನಿ ಅಂತಿದಾರೆ. ಸಿದ್ದರಾಮಯ್ಯ ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನ ಪ್ರಸ್ತಾಪಿಸುತ್ತಾರೆ. ಇವರಿಬ್ಬರ ಜಗಳದಲ್ಲಿ ಕರಾವಳಿಯಲ್ಲಿ ಹಲವು ಜನ ಬಲಿಯಾಗಿರುವುದಾಗಿ ಹೇಳಿದ್ದಾರೆ.

ಕರಾವಳಿಯಲ್ಲಿ ಬಿಜೆಪಿ ಕಾಂಗ್ರೆಸ್ ನವರು ರ್ಯಾಲಿ ಮಾಡಿ ಅಲ್ಲಿನ ಶಾಂತಿ ಕೆಡಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲೂ ಆಸ್ಪತ್ರೆಗೆ ಹೋದ ಮಕ್ಕಳು ಆಸ್ಪತ್ರೆಯಲ್ಲಿ ಆಮ್ಲಜನಕವಿಲ್ಲದೆ ಸಾಯುತ್ತಿವೆ. ಅಲ್ಲಿ ಯೋಗಿ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿಲ್ಲ. ಇಂತವರು ಸುರಕ್ಷೆ ಕೊಡುವ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಅವರ ರಾಜ್ಯದಲ್ಲೇ ಸುರಕ್ಷತೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕರನ್ನು ,ಬಿಜೆಪಿಯವರನ್ನು ಗಂಟೆಗಟ್ಟಲೆ ಬಯ್ಯಬಹುದು ಅದರಿಂದ ಜನರ ಕಷ್ಟಗಳಿಗೆ ಪರಿಹಾರವಿಲ್ಲ. ಆತ್ಮಹತ್ಯೆ ಮಾಡಿಕೊಂಡ 3500 ರೈತರ ಕುಟುಂಬಗಳ ಬಗ್ಗೆ ಮಾತಾಡಬೇಕಿದೆ. ರಾಯಚೂರಿನಲ್ಲಿ 78 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರನ್ನ ಸರ್ಕಾರ ನೋಡಲಿಲ್ಲ. ನಾನು ಐವತ್ತು ಸಾವಿರ ಪರಿಹಾರ ಒದಗಿಸಿದ್ದೇನೆ ಎಂದಿದ್ದಾರೆ.

ಇಂದಿಗೂ ರೈತರು ಸಾಯ್ತಾರೆ. ಸರ್ಕಾರಗಳು ಸೂಟ್ ಹಾಕಿಕೊಂಡವರ ಸಾಲ ಮನ್ನಾ ಮಾಡ್ತಾರೆ. ರೈತರು ಮಾಡಿಕೊಂಡಿರುವ 58 ಸಾವಿರ  ಕೋಟಿ ಸಾಲ ಮಾಡಿದ್ದೀರಿ. ಪಕ್ಷ ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ಅಷ್ಟೂ ಸಾಲ ಮನ್ನಾ ಮಾಡ್ತೇವೆ. ಎಷ್ಟೆ ತಿಪ್ಪರಲಾಗ ಹಾಕಿದ್ರೂ ಪರಮೇಶ್ವರ್ ಗೆಲ್ಲೋದಿಲ್ಲ. ಸಿದ್ದರಾಮಯ್ಯ ಮಾತೃಪೂರ್ಣ ಯೋಜನೆ ಮಾಡಿದ್ದಾರೆ..ಹೊಟ್ಟೆಯೊಳಗೆ ಮಗು ಇಟ್ಕೊಂಡು ಹೋಗಿ ಊಟ ಮಾಡಿಕೊಂಡು ಬರಬೇಕು. ಇದರ ಬದಲಿಗೆ ನಾವು ತಾಯಿ ಮಗು ರಕ್ಷಣೆಗೆ ಆರು ತಿಂಗಳ ಕಾಲ ಪ್ರತೀ ತಿಂಗಳು ಆರು ಸಾವಿರ ಕೊಡಲಾಗುವುದಾಗಿ ಘೋಷಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com