ದೇವೇಗೌಡ ಕುಟುಂಬದವರು ಟಿಕೆಟ್‌ ಕೇಳ್ಬಾರ್ದು ಅಂತೇನಿಲ್ವಲ್ಲ : HDK

ರಾಯಚೂರು : ಅಶೋಕ್ ಖೇಣಿ ಕಾಂಗ್ರೆಸ್‌ ಸೇರ್ಪಡೆ ಕುರಿತಂತೆ ಮಾಜಿ ಸಿಎಂ, ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದು,  ಅಶೋಕ್‌ ಖೇಣಿ ಸೇರ್ಪಡೆಯಿಂದೆ ನೈಸ್ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಚುನಾವಣೆಗೆ ಖೇಣಿ ಫಂಡಿಂಗ್ ಮಾಡುವಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಮೊದಲಿಂದಲೂ ಭ್ರಷ್ಟರಿಗೆ ಆಶ್ರಯ ನೀಡುತ್ತಾ ಬಂದಿದೆ. ಖೇಣಿ ಕಾಂಗ್ರೆಸ್‌ ಸೇರ್ಪಡೆಗೊಂಡಿರುವುದು ಹೊಸತೇನಲ್ಲ ಎಂದಿದ್ದಾರೆ.

ಇದೇ ವೇಳೆ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಯುಗಾದಿ ನಂತರ ಬಿಡುಗಡೆ ಮಾಡುವುದಾಗಿ ಹೇಳಿರುವ ಎಚ್‌ಡಿಕೆ, ನಮ್ಮ ಕುಟುಂಬದಿಂದ ಇಬ್ಬರೂ ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ದೇವೇಗೌಡ ಕುಟುಂಬದವರು ಟಿಕೆಟ್ ಕೇಳಬಾರದಂತೇನಿಲ್ಲ. ಈಗ ಎಲ್ಲಾ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದಿದ್ದಾರೆ.

Leave a Reply

Your email address will not be published.