ಮೆಚ್ಚಿನ ನಟನೊಂದಿಗೆ ಬಾಲಿವುಡ್ ಎಂಟ್ರಿಗೆ ರೆಡಿಯಾದ ಪ್ರಿಯಾ ವಾರಿಯರ್..?

ಮಲಯಾಳಂ ಭಾಷೆಯ ‘ ಒರು ಅದರ್ ಲವ್ ‘ ಚಿತ್ರದ ವೈರಲ್ ಹಾಡಿನ ಮೂಲಕ ಕಣ್ಣು ಹೊಡೆದು ಪಡ್ಡೆ ಹುಡುಗರ ಮನಗೆದ್ದ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋ ರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿ ರೂಪುಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂಡು ಹೊಸ ಹೊಸ ಕಾರಣಗಳಿಗಾಗಿ ಸುದ್ದಿಯಲ್ಲಿ ಮಿಂಚುತ್ತಲೇ ಇದ್ದಾರೆ.

Image result for priya varrier

ಈಗ ಲೇಟೆಸ್ಟ್ ಸುದ್ದಿ ಏನೆಂದರೆ 18 ವರ್ಷದ ಪ್ರಿಯಾ ವಾರಿಯರ್ ಬಾಲಿವುಡ್ ಅಂಗಳ ಪ್ರವೇಶಿಸಲು ರೆಡಿಯಾಗುತ್ತಿದ್ದಾರೆ. ಪ್ರಿಯಾ ಬಾಲಿವುಡ್ ನಲ್ಲಿ ತಮ್ಮ ಫೇವರಿಟ್ ನಟ ರಣವೀರ್ ಸಿಂಗ್ ಎಂದು ಹೇಳಿಕೊಂಡಿದ್ದರು. ಮೆಚ್ಚಿನ ನಟ ರಣವೀರ್ ಸಿಂಗ್ ಜೊತೆ ಪರದೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಪ್ರಿಯಾಗೆ ಸಿಕ್ಕಿದೆ.

Image result for priya varrier ranveer singh

ಹೌದು, ಗೋಲ್ ಮಾಲ್ ಖ್ಯಾತಿಯ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಲಿರುವ ‘ಸಿಂಬಾ’ ಚಿತ್ರದಲ್ಲಿ ರಣವೀರ್ ಸಿಂಗ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಿಯಾ ವಾರಿಯರ್ ಗೆ ಈ ಸಿನೆಮಾದಲ್ಲಿ ನಟಿಸುವ ಅವಕಾಶ ದೊರೆತಿದೆ ಎಂಬುದು ಸದ್ಯದ ಹಾಟ್ ನ್ಯೂಸ್.

Image result for priya varrier bollywood

ಆದರೆ ಚಿತ್ರದಲ್ಲಿ ಪ್ರಿಯಾ ವಾರಿಯರ್ ಅವರದ್ದು ನಾಯಕಿ ಅಥವಾ ಪ್ರಮುಖ ಪಾತ್ರವಲ್ಲ ಎಂದೂ ಸಹ ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಹೊಂದಿರುವ ಜನಪ್ರಿಯತೆಯನ್ನು ಬಳಸಿಕೊಳ್ಳುವ ಉದ್ದೇಶ ನಿರ್ದೇಶಕರಿಗಿದೆ ಎಂಬುದನ್ನು ಊಹಿಸಬಹುದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com