Love ನಲ್ಲಿ ಬಿದ್ದಿದಾರಂತೆ ಪೂನಮ್ ಪಾಂಡೆ : ಬಾಯ್ ಫ್ರೆಂಡ್ ಜೊತೆ ಪೋಸ್ ನೀಡಿದ ಬೆಡಗಿ
ಮಾಡೆಲಿಂಗ್ ಮೂಲಕ ನಟಿಯಾದ ಪೂನಮ್ ಪಾಂಡೆ ತಮ್ಮ ಬೋಲ್ಡ್ ಫೋಟೋಶೂಟ್, ಮಾಧ್ಯಮಗಳಿಗೆ ನೀಡುವ ಹೇಳಿಕೆಗಳಿಂದಲೇ ಸದಾ ಸುದ್ದಿ ವಾಹಿನಿಗಳಲ್ಲಿ ರಾರಾಜಿಸುತ್ತಾರೆ. 2011 ವಿಶ್ವಕಪ್ ವೇಳೆ ಭಾರತ ಚಾಂಪಿಯನ್ ಆದರೆ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರರ ಎದುರು ನಗ್ನಳಾಗಿ ಪೋಸ್ ನೀಡುತ್ತೇನೆ ಎಂದು ಆಫರ್ ಮಾಡಿ ಪೂನಮ್ ಪಾಂಡೆ ಟೂರ್ನಿಯನ್ನು ಮತ್ತಷ್ಟು ರಂಗೇರಿಸಿದ್ದರು.
ಲೇಟೆಸ್ಟ್ ಸುದ್ದಿ ಏನೆಂದರೆ ಹಾಟ್ ಬೆಡಗಿ ಪೂನಮ್ ಪಾಂಡೆ ಪ್ರೀತಿಯಲ್ಲಿ ಬಿದ್ದಿದಾರಂತೆ. ಮಾರ್ಚ್ 11 ರಂದು ಪೂನಮ್ ತಮ್ಮ ಹುಟ್ಟುಹಬ್ಬದ ದಿನ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೊ ಅನ್ನು ಪೂನಮ್ ಹಂಚಿಕೊಂಡಿದ್ದಾರೆ.
ಅಲ್ಲದೇ ಫೋಟೊ ಕೆಳಗೆ “My best birthday present ever…I love you my boyfriend @sambombay.” ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿರುವ ಪೂನಮ್ ಪಾಂಡೆ ಬಾಯ್ ಫ್ರೆಂಡ್ ಸ್ಯಾಮ್ ಬಾಂಬೆ ಬಾಲಿವುಡ್ ನಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದಾರೆ.