ಮಂಗಳೂರು ಪಬ್‌ ದಾಳಿ ಪ್ರಕರಣ : ಎಲ್ಲಾ ಆರೋಪಿಗಳ ಖುಲಾಸೆ ಮಾಡಿದ ಕೋರ್ಟ್‌

ಮಂಗಳೂರು : 2009ರ ಪಬ್‌ ದಾಳಿ ಪ್ರಕರಣಕ್ಕೆ ನ್ಯಾಯಾಲಯ ಕೊಲೆಗೂ ಫುಲ್‌ಸ್ಟಾಪ್‌ ಇಟ್ಟಿದ್ದು, ಎಲ್ಲಾ 26 ಆರೋಪಿಗಳನ್ನೂ ನಿರ್ದೋಷಿ ಎಂದಿದೆ. ಸುಧೀರ್ಘ ವಿಚಾರಣೆಯ ಬಳಿಕ ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.

2009 ರ ಜನವರಿ 24ರಂದು ನಡೆದಿದ್ದ ಪಬ್‌ ದಾಳಿ ಪ್ರಕರಣದಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌, ಪ್ರಸಾದ್‌ ಅತ್ತಾವರ್‌ ಸೇರಿದಂತೆ 26 ಮಂದಿ ಪ್ರಕರಣದ ಆರೋಪಿಗಳಾಗಿದ್ದರು. ಈಗ ಎಲ್ಲರನ್ನೂ ಖುಲಾಸೆಗೊಳಿಸಿದ್ದು, ಈ ಸಂಬಂಧ ಪ್ರಮೋದ್‌ ಮುತಾಲಿಕ್‌ ಸೇರಿದಂತೆ ಅನೇಕರು ಸಂಭ್ರಮಾಚರಣೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಮುತಾಲಿಕ್‌, ಪಬ್ ದಾಳಿ‌ ಸಂಬಂಧ ನನ್ನ ಬಂಧನ ಅಕ್ಷಮ್ಯ ಅಪರಾಧ. ನಾನು ಪಬ್ ದಾಳಿ ಘಟನೆಯಲ್ಲೇ ಇರಲಿಲ್ಲ. ಅವತ್ತಿನ ಬಿಜೆಪಿ ಸರ್ಕಾರ ನನ್ನನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಿತ್ತು. ನನಗೆ ಮಾನಸಿಕ ಹಿಂಸೆ ನೀಡಿದ ಬಿಜೆಪಿಗೆ ಧಿಕ್ಕಾರ. ಘಟನೆಯ ಉದ್ದೇಶ ಹೊಡೆಯುವುದಾಗಿರಲಿಲ್ಲ. ಆದರೆ ಪಬ್ ಬಾರ್ ನಮ್ಮ ಸಂಸ್ಕೃತಿ ಅಲ್ಲ ಎಂಬ ಕಾರಣಕ್ಕೆ ದಾಳಿ ಮಾಡಿದ್ವಿ. ಬಿಜೆಪಿ ಸರಕಾರ ಇದ್ದಾಗ ನನ್ನನ್ನು ಏಳು ಬಾರಿ ಜೈಲಿಗೆ ಹಾಕಿದ್ದಾರೆ. ಮಂಗಳೂರಿಗೆ ಒಂದು ವರ್ಷ ಬರದಂತೆ ಬಿಜೆಪಿ ಸರ್ಕಾರ ತಡೆದಿತ್ತು. ವೈನ್ ಕಲ್ಚರ್ ನಿಂದ ದೇಶ ಹಾಳಾಗ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಪಬ್ ಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com