KPCC ಅಧ್ಯಕ್ಷ ಜಿ. ಪರಮೇಶ್ವರ್‌ ಅವರ ಮಗ ಈಗ ಅವನಲ್ಲ ಅವಳು !

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳ ಮಕ್ಕಳೂ ಭಾರೀ ಸುದ್ದಿ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಮಗನ ಹೆಸರೂ ಈಗ ಸೇರ್ಪಡೆಯಾಗಿದೆ. ಆದರೆ ಇವರು ಸುದ್ದಿಯಾಗುತ್ತಿರುವುದು ರಾಜಕೀಯದ ಹೆಸರಿನಲ್ಲಿ ಅಲ್ಲ, ಬದಲಿಗೆ ಲಿಂಗ ಪರಿವರ್ತನೆ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ.

ಹೌದು ಜಿ. ಪರಮೇಶ್ವರ್ ಅವರ ಮಗ ಶಶಾಂಕ್‌ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿದೆ. ಈ ಬಗ್ಗೆ ಶಶಾಂಕ್‌ ಹೆಮ್ಮೆಯಿಂದ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ನಾನು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದೇನೆ. ಇದರಿಂದ ನನಗೆ ಸಂತೋಷವಾಗಿದೆ. ಇದರಿಂದ ಅವಮಾನದ ಬದಲು ನೊಂದ ಮಹಿಳೆಯರ ಏಳ್ಗೆಗಾಗಿ ಹಾಗೂ ಅವರ ನೋವಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ ಇದು ನನ್ನ ಸ್ವಂತ ನಿರ್ಧಾರ. ನನಗೆ ಇದು ಸರಿ ಎನಿಸಿದ ಮೇಲೆಯೇ ನಾನು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ.

ಇಷ್ಟು ದಿನ ನಾನು ಸಮಾಜದ ಕಟ್ಟು ಪಾಡುಗಳಿಗೆ ಹೆದರಿಕೊಂಡು ಬದುಕುತ್ತಿದ್ದೆ. ಆದರೆ ಇನ್ಮುಂದೆ ಹೀಗಾಗುವುದಿಲ್ಲ. ನಾನು ಕೆಲ ತಿಂಗಳ ಹಿಂದೆ ವಿದೇಶದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದೇನೆ. ಇದನ್ನು ತಿಳಿದ ನನ್ನ ಗೆಳೆಯ ಗೆಳತಿಯರು ನನ್ನಿಂದ ದೂರವಾಗಿದ್ದಾರೆ. ಆದರೂ ಪರವಾಗಿಲ್ಲ, ಇನ್ನುಮುಂದೆ ನನ್ನಿಷ್ಟದಂತೆ ನಾನು ಬದುಕುತ್ತೇನೆ ಎಂದಿದ್ದಾರೆ.

ಅಲ್ಲದೆ ನಾನು ಸಲಿಂಗಿಯಲ್ಲ. ಅನೇಕ ವರ್ಷಗಳಿಂದ ನನ್ನೊಳಗಾದ ಬದಲಾವಣೆಯ ಪ್ರಕ್ರಿಯೆಯಿಂದಾಗಿ ನಾನು ಪರಿವರ್ತನೆಯಾಗಿದ್ದೇನೆ ಎಂದಿದ್ದು, ಶಶಾಂಕ್‌  ಎಂದಿದ್ದ ಹೆಸರನ್ನು ಶನಾ ಎಂದು ಬದಲಿಸಿಕೊಂಡಿದ್ದಾರೆ. ಅಲ್ಲದೆ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಪ್ರಪಂಚದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯದ ಪರವಾಗಿ ಹೋರಾಡುವುದಾಗಿ ಹೇಳಿದ್ದಾರೆ.

ಮಗ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದರ ಬಗ್ಗೆ ಇನ್ನು ಪರಮೇಶ್ವರ್‌ ದಂಪತಿಗೆ ತಿಳಿದಿಲ್ಲ. ಅಲ್ಲದೆ ಪಕ್ಷದವರಿಗೂ ಈ ವಿಚಾರ ತಿಳಿದಿಲ್ಲ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com