ಚಿಕ್ಕಮಗಳೂರಿನಲ್ಲಿ ಹಾವಿನ ವಿಚಿತ್ರ ಕಥೆ : ಕೇಳಿದ್ರೆ ಹೀಗೂ ಉಂಟಾ ಅನ್ತೀರಿ..!

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಾಗರಹಾವಿನ ವಿಚಿತ್ರ ಘಟನೆಯೊಂದು ನಡೆದಿದೆ.ಆಹಾರ ಅರಸಿ ಬಂದಿದ್ದ  ನಾಗರಹಾವೊಂದು ಗ್ರಾಮದ ಚಂದ್ರು ಎಂಬುವವರ ಮನೆಯಲ್ಲಿ ಕಾಣಿಸಿಕೊಂಡಿದ್ದು, ಅಡುಗೆಗೆ ತಂದಿಟ್ಟಿದ್ದ ಮೂರು ಕೋಳಿ ಮೊಟ್ಟೆಗಳನ್ನು ಸೇವಿಸಿ ಮುಂದಕ್ಕೆ ಹೋಗಲು ಆಗದೆ ಮನೆಯಲ್ಲೇ ಬೀಡುಬಿಟ್ಟಿತ್ತು.

ಇದರಿಂದ ಭೀತಿಗೊಂಡ ಮನೆಯವರು ಕೂಡಲೇ ಸ್ನೇಕ್ ಆರಿಫ್ ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಆರಿಫ್ ಹಾವನ್ನು ಮನೆಯಿಂದ ಹೊರ ತಂದು ಅಂಗಳದಲ್ಲಿ ಆಟವಾಡಿಸುವ ವೇಳೆ ಮೂರು ಕೋಳಿ ಮೊಟ್ಟೆಗಳನ್ನು ನುಂಗಿದ್ದ ನಾಗರಹಾವು ಎಲ್ಲವನ್ನು ತನ್ನ ಬಾಯಿಂದ ಹೊರ ಹಾಕಿದೆ. ಇತ್ತ ಸ್ನೇಕ್ ಆಸಿಫ್ ಹಾವಿನ ಬಳಿ ನಿಂತು ಮೊಟ್ಟೆ ಹೊರ ಹಾಕು ಅನ್ನುತ್ತಿದ್ದಂತ್ತೆ ನೆಲದಲ್ಲೇ ಒದ್ದಾಡುತ್ತ ತಿಂದ ಮೂರು ಮೊಟ್ಟೆಗಳನ್ನು ಕಕ್ಕಿದೆ. ಅಲ್ಲೇ ಇದ್ದ ಸ್ಥಳೀಯರು ಅಪರೂಪದ ಘಟನೆ ಕಂಡು ಆಶ್ಚರ್ಯ ಪಟ್ಟಿರುವುದಲ್ಲದೆ,ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ವೈರಲ್ ಮಾಡ್ತಿದಾರೆ. ಇನ್ನು ಹಾವನ್ನು ಸೆರೆ ಹಿಡಿದ ಸ್ನೇಕ್ ಆರಿಫ್ ಸುರಕ್ಷಿತವಾಗಿ ಚಾರ್ಮಾಡಿ ಕಾಡಿಗೆ ಬಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com