ರಿಯಲ್‌ ಡ್ರಾಮಾ ಮಾಡೋರ್ಗಿಂತ ಸಕತ್ತಾಗಿ ರಾಹುಲ್‌ ಗಾಂಧಿ ನಾಟಕ ಮಾಡ್ತಾರೆ : ಅನಂತ್‌ ಹೆಗಡೆ

ಬೆಳಗಾವಿ : ರಾಹುಲ್‌ ಗಾಂಧಿ ಒಳ್ಳೆಯ ನಾಟಕಕಾರ. ರಿಯಲ್‌ ಡ್ರಾಮಾ ಮಾಡುವವರಿಗಿಂತ ಚೆನ್ನಾಗಿ ರಾಹುಲ್‌ ಗಾಂಧಿ ಡ್ರಾಮಾ ಮಾಡುತ್ತಾರೆ. ನಿಮಗೆ ಮನರಂಜನೆ ಬೇಕಾದರೆ ಹೇಳಿ ರಾಹುಲ್‌ ಗಾಂಧಿಗೆ ನಾನೇ ಪತ್ರ ಬರೆದು ಖಾನಾಪುರಕ್ಕೆ ಬರಲು ಹೇಳುತ್ತೇನೆ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ವ್ಯಂಗ್ಯ ಮಾಡಿದ್ದಾರೆ.

ರಾಹುಲ್‌ ಕಾಲಿಟ್ಟಲೆಲ್ಲ ಬಿಜೆಪಿ ನಾಶವಾಗುತ್ತಿದೆ. ಮನೆ ಕೆಡವಲು ಜೆಸಿಬಿ ಬೇಕಾಗಿಲ್ಲ, ರಾಹುಲ್ ಗಾಂಧಿನ ಕಳಿಸಿದರೆ ಅದಾಗಿಯೇ ಬೀಳುತ್ತದೆ.  ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳು ಕೆಲಸ ಮಾಡುಲ ಆಗುತ್ತಿಲ್ಲ ಎಂದು ಪತ್ರ ಬರೆಯುತ್ತಿದ್ದಾರೆ. ಶಾಸಕರು ಮತ್ತು ಮಂತ್ರಿಗಳು ಅಧಿಕಾರಿಗಳ‌ ಮೇಲೆ ಒತ್ತಡ ತರುತ್ತಿದ್ದು, ದಯನೀಯ ಸ್ಥಿತಿ ನಮ್ಮ ರಾಜ್ಯದಲ್ಲಿದೆ.
ಹುಡುಕಿ‌ ಹುಡುಕಿ ಹಿಂದೂ ಕಾರ್ಯಕರ್ತರನ್ನ ಕೊಲೆ ಮಾಡುತ್ತಿದ್ದಾರೆ ಇದಕ್ಕೆ ಸಿದ್ದರಾಮಯ್ಯ ಅವರನ್ನ ಮನೆಗೆ ಕಳುಹಿಸುವ ಮೂಲಕ ಉತ್ತರಕೊಡಬೇಕಿದೆ. ಕೆಲ ಕಾಂಗ್ರೆಸ್ ಸ್ನೇಹಿತರಿಗೆ ಹೇಳಿದ್ದೀವಿ, ನಮ್ಮ ಜೊತೆಗೆ ಬನ್ನಿ ಅಂತ. ಒಂದು ವೇಳೆ ನೀವು ಬರಲ್ಲಾ ಅಂದ್ರೆ ನಿಮ್ಮನ್ನ ಎತ್ತಾಕ್ಕೊಂಡಾದ್ರೂ ನಮ್ಮ ಜೊತೆಗೆ ಕರೆದುಕೊಂಡು ಹೋಗ್ತಿವಿ ಎಂದಿದ್ದಾರೆ.

Leave a Reply

Your email address will not be published.