ಹಿಂದೂ ಮಹಾಸಾಗರದಲ್ಲಿ ಚಂಡಮಾರುತ : ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು :ಬೇಸಿಗೆ ಕಾಲ ಶುರುವಾಗಿದೆ. ಆರಂಭದಲ್ಲೇ ಉಷ್ಣಾಂಶ ಹೆಚ್ಚಿದ್ದು, ಬಿಸಿಲ ತಾಪಕ್ಕೆ ಜನ ತತ್ತರಿಸುವ ಪರಿಸ್ಥಿತಿ ಎದುರಾಗಿದೆ. ಈ ಮದ್ಯೆ ಇನ್ನೊಂದು ವಾರ ಜನರಿಗೆ ಸ್ಪಲ್ಪ ನಿರಾಳವಾಗಲಿದ್ದು. ಇನ್ನೊಂದು ವಾರದೊಳಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೌದು ಹಿಂದೂ ಮಹಾಸಾಗರದಲ್ಲಿ ಚಂಡಮಾರುತ ಏಳಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹವಾಮಾನ ಇಲಾಖೆ ನಿರ್ದೇಶಕ ಎಂ. ಸುಂದರ್‌ ಮೈತ್ರಿ ಹೇಳಿಕೆ ನೀಡಿದ್ದು, ಕರ್ನಾಟದ ದಕ್ಷಿಣ ಭಾಗ ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಮಾರ್ಚ್‌ 14ರಂದು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್‌ 15 ಹಾಗೂ 16ರಂದು ಮಳೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಸಮುದ್ರದಲ್ಲಿ ನಿಮ್ನಿ ಚಂಡಮಾರುತ ಏಳುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ದೊಡ್ಡ ಅಲೆಗಳು ಅಪ್ಪಳಿಸಲಿದ್ದು, ಈಗಾಗಲೆ ಮೀನುಗಾರಿಕೆಗೆ ಹೋಗಿರುವವರಿಗೂ ವಾಪಸ್ ಬರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.