ನಾನು ಎಲ್ಲಾ ವರ್ಗದ ಜಯಂತಿ ಮಾಡಿದ್ದೇನೆ, ಅಂದ ಮೇಲೆ ನಾನು ಹಿಂದೂ ಅಲ್ವಾ ? : CM

ಬಾಗಲಕೋಟೆ : ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ನಾನು ಸಿದ್ದರಾಮಯ್ಯ ಅಲ್ಲವಾ ?. ನಾನು ಎಲ್ಲಾ ವರ್ಗದ ಜಯಂತಿಗಳನ್ನು ಮಾಡಿಲ್ಲವಾ ?. ಜಯಂತಿಗಳನ್ನು ಮಾಡಿದ ಮೇಲೆ ನಾನು ಹಿಂದೂವಾಗುತ್ತೀನಲ್ಲವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಗರು ಅಧಿಕಾರಕ್ಕೆ ಬರೋವರೆಗೂ ಹಿಂದು. ಅಧಿಕಾರಕ್ಕೆ ಬಂದ‌ ಮೇಲೆ ನಾ ಮುಂದು ನೀವು ಹಿಂದು ಅಂತಾರೆ. ಡೋಂಗಿಗಳಿಗೆ ಅವಕಾಶ ಮಾಡಿಕೊಡಬೇಡಿ. ಭಾಷಣ ಮಾಡಲಿಕ್ಕೆ ಬಹಳ ಜನ ಡೋಂಗಿಗಳು ಬರುತ್ತಾರೆ. ದಯಮಾಡಿ ಅವರಿಗೆ ಅವಕಾಶ ಮಾಡಿಕೊಡಬೇಡಿ ಎಂದು ನೇಕಾರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com