ರೈತರ ಸಾಲ ಮನ್ನಾ ಮಾಡ್ತೀನಿ ಅನ್ನೋ HDK ವೀರನೂ ಅಲ್ಲ, ಶೂರನೂ ಅಲ್ಲ : ಸಿದ್ದರಾಮಯ್ಯ

ತುಮಕೂರು : ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್‌ ಅವರ ಕ್ಷೇತ್ರವಾದ ಕೊರಟಗೆರೆಯಲ್ಲಿ ಜನಾಶಿರ್ವಾದ ಕಾರ್ಯಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇವರಾಜ್‌ ಅರಸರ ನಂತರ ಪೂರ್ಣಾವಧಿ ಸುಭದ್ರ ಸರ್ಕಾರ ಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿ ಕೊಟ್ಟರು. ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಚೆಕ್‌ಗಳ ಮೂಲಕ ಲಂಚ ತಗೊಂಡು ನೇರವಾಗಿ ಜೈಲಿಗೆ ಹೋದರು. ನರೇಂದ್ರ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ ಭ್ರಷ್ಟ‌ ಸರ್ಕಾರ ಅಂತಾರೆ. ಪಕ್ಕದಲ್ಲಿ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ, ಜನಾರ್ದನರೆಡ್ಡಿ ಯನ್ನೂ ಕೂರಿಸಿಕೊಂಡು ಪ್ರಧಾನಿ ಈ ರೀತಿ ಭಾಷಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಿ‌.ಪರಮೇಶ್ವರ್ ಒತ್ತಾಯದ ಮೇರೆಗೆ ಕೊರಟಗೆರೆ ಕ್ಷೇತ್ರದ 39 ಕೆರೆ ತುಂಬಿಸಲು 592 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದೇವೆ. ಇಲ್ಲಿನ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಕೆರೆ ಅಭಿವೃದ್ದಿ ಮಾಡಿ ಎಂದು ಕೇಳಿಲ್ಲ. ಜಿ.ಪರಮೇಶ್ವರ್ ಮನವಿ ಮಾಡಿದ್ರಿಂದ ಕೆರೆ ಅಭಿವೃದ್ಧಿ ಗೆ ಹಣ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ, ಜೆಡಿಎಸ್ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ ಎಂದಿರುವ ಸಿಎಂ,ಸರದಿ ಸಾಲಿನಲ್ಲಿ ಜೆಡಿಎಸ್ ಎಂ ಎಲ್ ಎ ಗಳು ಪಕ್ಷ ತೊರೆಯುತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಉಳಿದುಕೊಂಡಿದೆ. ಇವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅವರು ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಆದ್ರೆ ಜೆಡಿಎಸ್ 25 ಸ್ಥಾನಕ್ಕಿಂತ ಹೆಚ್ಚು ಬರಲು ಸಾಧ್ಯವಿಲ್ಲ. ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುವುದಾಗಿ ಹೇಳಿ ಐಷಾರಾಮಿ ಹಾಸಿಗೆ, ತಗೊಂಡು ಹೋಗಿ ಮಲಗುತಿದ್ರು ಎಂದು ವ್ಯಂಗ್ಯ ಮಾಡಿದ್ದಾರೆ.

ನಾವು ಅಧಿಕಾರಕ್ಕೆ ಬಂದ್ರೆ ಎಲ್ಲಾ ರೈತರ ಸಾಲ ಮನ್ನಾ ಮಾಡ್ತೀನಿ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅಧಿಕಾರ ಇದ್ದಾಗ ಏನು ಮಾಡಿದ್ರಿ. ಅವರು ವೀರರೂ ಅಲ್ಲ.. ಶೂರರೂ ಅಲ್ಲ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಆಗೋಲ್ಲ ಎಂದಿದ್ದಾರೆ.

 

 

 

 

Leave a Reply

Your email address will not be published.