ಇನ್ನು ಮನೆ ಮನೆಗೆ ಕಾಂಗ್ರೆಸ್‌ ಅಲ್ಲ, ಶಾಶ್ವತವಾಗಿ ಕಾಂಗ್ರೆಸ್‌ ಮನೆಗೇ… : C.T ರವಿ

ಶಿರಸಿ : ಶಿರಸಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಟಿ ರವಿ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದಾರೆ.

 

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ರವಿ, ಕೆಟ್ಟ ಸರ್ಕಾರವನ್ನು ಓಡಿಸಲು ಈ ನವಶಕ್ತಿ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಕುಟುಂಬ ಮಾಲಿಕತ್ವದ ಪಕ್ಷವಿದ್ದಂತೆ. ಆರ್ ಜೆ ಡಿ ಕೂಡ ಕುಟುಂಬ ವಾರಸುದಾರಿಕೆ ಪಕ್ಷ. ಜೆಡಿಎಸ್ ಕೂಡ ಅದೇ ಪಕ್ಷ. ಕಾಂಗ್ರೆಸ್ ಸರ್ಕಾರ ಒಡೆದು ಆಳು ನೀತಿ ಅನುಸರಿಸ್ತಿದೆ. ಓಟು ಒಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ಮನೆ ಮನೆಗೆ ಕಾಂಗ್ರೆಸ್ ಅಲ್ಲ. ಈ ಬಾರಿ ಮನೆಗೇ ಕಾಂಗ್ರೆಸ್ ಮಾಡ್ತಿವಿ ಎಂದಿರುವ ರವಿ, ಕಾರ್ಯಕರ್ತರೇ ಮಾಲೀಕರಾಗಿರುವ ಯಾವುದಾದರು ಪಕ್ಷವಿದ್ದರೆ  ಅದು ಬಿಜೆಪಿ ಮಾತ್ರ. ಕಳ್ಳರಿಗೆಲ್ಲ ಸಾಲ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ವಿಜಯ ಮಲ್ಯ, ರಾಜಗೋಪಾಲ್, ಸತ್ಯಂ ರಾಜು ,ನೀರವ್ ಮೋದಿ ಇವರಿಗೆಲ್ಲ ಸಾಲ ಕೊಟ್ಟಿದ್ದು ಕಾಂಗ್ರೆಸ್ ನ ಕಾಣದ ಕೈಗಳೇ. ನಾನು ಕೂಡಾ ಒಕ್ಕಲಿಗ ಆದ್ರೆ ಜಾತಿವಾದಿ ಒಕ್ಕಲಿಗ ಅಲ್ಲ. ಹಿಂದುವಾದಿ ರಾಷ್ಟ್ರವಾದಿ ಒಕ್ಕಲಿಗ ಎಂದಿದ್ದಾರೆ.

ಸಿದ್ದರಾಮಯ್ಯನವರ ಸರ್ಕಾರ ಸಾಲದಲ್ಲಿ ನಂಬರ್‌ 1 ಆಗಿದೆ. 66 ವರ್ಷದಲ್ಲಿ ಕ.ಸಿ ರೆಡ್ಡಿಯಿಂದ ಜಗದೀಶ್ ಶೆಟ್ಟರ್ ವರೆಗಿನ ಒಟ್ಟೂ ಸಾಲ 1ಲಕ್ಷ 12 ಸಾವಿರ ಕೋಟಿ . ಆದ್ರೆ ಸಿದ್ದರಾಮಯ್ಯನವರ ಸಾಲ 1ಲಕ್ಷ 42ಸಾವಿರ ಕೋಟಿ. ಇದ್ಯಾವದು ಜಾಹೀರಾತಿನಲ್ಲಿ ಬರಲ್ಲ ಎಂದು ಅಣಕವಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com