ಪ್ಲೀಸ್‌ SSLC ಪಾಸ್‌ ಮಾಡು, ಗಂಡಂಗೆ ಬುದ್ದಿಕೊಡು:ಸವದತ್ತಿ ಯಲ್ಲಮ್ಮಂಗೆ ಭಕ್ತರಿಂದ ವಿಚಿತ್ರ ಪತ್ರ

ಬೆಳಗಾವಿ : ಉತ್ತರ ಕರ್ನಾಟಕದ ದೇವೆ ಸವದತ್ತಿ ಯಲ್ಲಮ್ಮ ಭಕ್ತ ಅಭೀಷ್ಟಗಳನ್ನು ನೆರವೇರಿಸುತ್ತಾಳೆ ಎಂಬ ನಂಬಿಕೆ ಇದೆ. ಅಂತೆಯೇ ಆ ದೇವಾಲಯಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುವ ಪದ್ದತಿ ರೂಢಿಯಲ್ಲಿದೆ.

ಯಲ್ಲಮ್ಮನ ಸನ್ನಿಧಿಗೆ ಕೇವಲ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಗೋವಾ ಸೇರಿದಂತೆ ಸುತ್ತಮುತ್ತಲ ರಾಜ್ಯಗಳಿಂದಲೂ ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥಗಳನ್ನು ಬರೆದು ಹುಂಡಿಯಲ್ಲಿ ಹಾಕುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ಹುಂಡಿಯ ದುಡ್ಡು ಎಣಿಸುವ ಕೆಲಸ ನಡೆದಿತ್ತು. ಈ ವೇಳೆ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಇಂಗ್ಲೀಷ್‌, ಕನ್ನಡ, ಹಿಂದಿಯಲ್ಲಿ ಬರೆದ ಬಗೆ ಬಗೆಯ ಪತ್ರಗಳು ಲಭ್ಯವಾಗಿವೆ.

ಅಮ್ಮಾ ಯಲ್ಲಮ್ಮ ನನಗೆ ಸಹಾಯ ಮಾಡಿದ್ದೀಯ. ನಂಜನ ಗೂಡಿನ ಆಸ್ತಿಯನ್ನು ನನಗೇ ಸಿಗುವಂತೆ ಮಾಡು. ನನ್ನ ಗಂಡನನ್ನು ಸರಿ ದಾರಿಗೆ ತರುವ ಕೆಲಸ ಮಾಡು. ನನಗೆ ಕಷ್ಟ ಬಂದಾಗ ಮಾತ್ರ ನೀನು ನೆನಪಾಗುತ್ತೀಯ. ನನ್ನನ್ನು ಕ್ಷಮಿಸಿಬಿಡು. ಎಸ್‌ಎಸ್‌ಎಲ್‌ಸಿಯಲ್ಲಿ ನನ್ನನ್ನು ಪಾಸ್‌ ಮಾಡು….ಹೀಗೆ ವಿಚಿತ್ರ ಕೋರಿಕೆಯ ಪತ್ರಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಸಿಕ್ಕ ಪತ್ರವೊಂದರಲ್ಲಿ ವ್ಯಕ್ತಿಯೊಬ್ಬರನ್ನು ನಾಶ ಮಾಡು, ಅವನು ಉದ್ದಾರವಾಗಬಾರದು. ಒಂದು ವೇಳೆ ನನ್ನ ಇಷ್ಟಾರ್ಥ ಈಡೇರಿದರೆ ನನ್ನ ಸಂಬಳದಲ್ಲಿ ಅರ್ಧ ಸಂಬಳವನ್ನು ನಿನಗೆ ಒಪ್ಪಿಸುತ್ತೇನೆ ಎಂದೂ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಬೆಂಗಳೂರಿನ ಬನಶಂಕರಿ ದೇವಾಲಯದ ಹುಂಡಿ ಒಡೆದಾಗಲೂ ಇಂತಹದ್ದೇ ಪತ್ರಗಳು ಲಭ್ಯವಾಗಿದ್ದು, ಹುಂಡಿ ಎಣಿಕೆ ಮಾಡುತ್ತಿದ್ದವರನ್ನು ಅಚ್ಚರಿಗೊಳಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com