ಶಮಿ ಪತ್ನಿಯ ಮೊದಲನೇ ಗಂಡ ಪ್ರತ್ಯಕ್ಷ..! : ಹಸೀನ್ ಬಗ್ಗೆ ಮಾಜಿ ಪತಿ ಹೇಳಿದ್ದೇನು..?

ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಶಮಿ ತನಗೆ ಕಿರುಕುಳ ನೀಡಿದ್ದಾರೆ, ಮೋಸ ಮಾಡಿದ್ದಾರೆ, ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪತ್ನಿ ಹಸೀನ್ ಕೋಲ್ಕತಾ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಶಮಿ ವಿರುದ್ಧ ಕೊಲೆ ಯತ್ನ ಸೇರಿ ಒಟ್ಟು 7 ಪ್ರಕರಣ ದಾಖಲಾಗಿದ್ದವು.

Image result for hasin jahan saifuddin shami

ದಿನಕ್ಕೊಂದು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವ ಈ ಪ್ರಕರಣದಲ್ಲಿ ಈಗ ಹೊಸ ಪಾತ್ರವೊಂದು ಪ್ರತ್ಯಕ್ಷವಾಗಿದೆ. ಅದು ಶಮಿ ಪತ್ನಿಯ ಮೊದಲನೇ ಗಂಡ ಸೈಫುದ್ದೀನ್. ಹೌದು.. ನೀವು ಓದಿದ್ದು ಸರಿಯಾಗಿಯೇ ಇದೆ, ಮೊಹಮ್ಮದ್ ಶಮಿ ಹಸೀನ್ ಜಹಾನ್ ಅವರ ಎರಡನೇ ಪತಿಯಾಗಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಮಾಜಿ ಪತಿ ಸೈಫುದ್ದೀನ್ ಹಸೀನ್ ಜೊತೆಗಿನ ತಮ್ಮ ಮದುವೆ ಜೀವನದ ಬಗ್ಗೆ ಹೇಳಿದ್ದಾರೆ. ‘ ಹಸೀನ್ ಹತ್ತನೇ ತರಗತಿಯಲ್ಲಿದ್ದಾಗ ನಾನು ಹಸೀನ್ ಗೆ ಪ್ರಪೋಸ್ ಮಾಡಿದ್ದೆ. ಅವಳು ಶಾಲೆಯಲ್ಲಿ ಓದು ಹಾಗೂ ಕ್ರೀಡೆಯಲ್ಲಿ ಮುಂದಿದ್ದಳು. 2002 ರಲ್ಲಿ ನಮ್ಮಿಬ್ಬರ ಪ್ರೇಮ ವಿವಾಹವಾಗಿತ್ತು. ನಮಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ದೊಡ್ಡವಳು 10 ನೇ ತರಗತಿಯಲ್ಲಿ, ಚಿಕ್ಕವಳು 6ನೇ ತರಗತಿಯಲ್ಲಿ ಓದತ್ತಾಳೆ ‘

Image result for hasin jahan saifuddin shami

 

‘ 2010 ರಲ್ಲಿ ನಮ್ಮಿಬ್ಬರ ವಿಚ್ಛೇದನವಾಗಿತ್ತು. ಅವಳು ನನ್ನನ್ನ ಯಾಕೆ ಬಿಟ್ಟು ಹೋದಳು ಎಂಬುದು ಆಕೆಗಷ್ಟೇ ಗೊತ್ತು. ನಮ್ಮಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅವಳಿಗೆ ತನ್ನ ಕಾಲ ಮೇಲೆ ನಿಂತುಕೊಂಡು ತಾನು ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡಿದ್ದಳು ‘ ಎಂದು ಹೇಳಿದ್ದಾರೆ.

Image result for hasin jahan saifuddin shami

‘ ಆಕೆಯೊಂದಿಗೆ ನನಗೀಗ ಯಾವ ರೀತಿಯ ಸಂಬಂಧವೂ ಇಲ್ಲ. ಶಮಿ ಹಾಗೂ ಹಸೀನ್ ಬದುಕಿನಲ್ಲಿ ನಾನು ಪ್ರವೇಶಿಸಲು ಬಯಸುವುದಿಲ್ಲ ‘ ಎಂದು ಸೈಫುದ್ದೀನ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com