ಪತ್ನಿ ಹಸೀನ್ ಆರೋಪಗಳ ಬಗ್ಗೆ ಮೊಹಮ್ಮದ್ ಶಮಿ ಹೇಳಿದ್ದೇನು..?

ಪತ್ನಿ ಹಸೀನ್ ಜಹಾನ್ ನೀಡಿದ ದೂರಿನ ಆಧಾರದ ಮೇಲೆ ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ‘ಕೊಲೆ ಯತ್ನ’ ಸೇರಿ 7 ಪ್ರಕರಣ ದಾಖಲಾಗಿದ್ದವು. ಶಮಿ ತಮಗೆ ಕಿರುಕುಳ ನೀಡಿದ್ದು, ಬೇರೆ ಮಹಿಳೆಯರೊಂದಿಗೆ ಪ್ರೇಮ ಸಂಬಂಧವಿರಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಪತ್ನಿ ಹಸೀನ್ ಜಹಾನ್ ಆರೋಪಿಸಿದ್ದರು.

ಈ ಕುರಿತು ಮೊಹಮ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದು ‘ ದಿನದಿಂದ ದಿನಕ್ಕೆ ನನ್ನ ಮೇಲೆ ಹಲವು ಆರೋಪಗಳು ಕೇಳಿ ಬರುತ್ತಿವೆ. ಈಗಲೇ ನಾನು ಏನನ್ನೂ ಹೇಳಲು ಬಯಸುವುದಿಲ್ಲ, ಪೂರ್ಣವಾಗಿ ತನಿಖೆ ನಡೆಯಲಿ. ನನಗೆ ಬಿಸಿಸಿಐ ಮೇಲೆ ವಿಶ್ವಾಸವಿದೆ. ತನಿಖೆಯ ನಂತರ ಬೋರ್ಡ್ ಅಧಿಕಾರಿಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ನಿರೀಕ್ಷೆಯಿದೆ ‘ ಎಂದಿದ್ದಾರೆ.

Leave a Reply

Your email address will not be published.