ಬೆಳ್ಳಿ ತೆರೆಯ ಮೇಲೆ ಅಪ್ಪ-ಮಗನಾಗಿ ಬರ್ತಾರಾ ಜಗ್ಗೇಶ್‌- ಕಿಚ್ಚ…? ನವರಸನಾಯಕ ಹೇಳಿದ್ದೇನು ?

ಬೆಂಗಳೂರು : ಕನ್ನಡ ಸಿನಿಮಾರಂಗದಲ್ಲಿ ನವರಸ ನಾಯಕ ಎಂದೇ ಹೆಸರು ಗಳಿಸಿರುವ, ಸದಾ ನಗುವಿನ ಚಟಾಕಿ ಹಾರಿಸುತ್ತ ಎಲ್ಲರನ್ನೂ ನಗಿಸುವ ನಟ ಜಗ್ಗೇಶ್‌ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅನೇಕ ವರ್ಷಗಳಿಂದ ಆತ್ಮೀಯರಾಗಿರುವ ಜಗ್ಗೇಶ್‌ ಹಾಗೂ ಕಿಚ್ಚ ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದ್ದು, ಇದಕ್ಕೆ ಜಗ್ಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ಮಲ್ಟಿ ಸ್ಟಾರ್‌ಗಳ ಸಿನಿಮಾಗಳು ಹೆಚ್ಚಾಗುತ್ತಿದ್ದು, ಯಶಸ್ಸು ಸಾಧಿಸುತ್ತಿವೆ. ಅಲ್ಲದೆ ಜಗ್ಗೇಶ್‌ ಹಾಗೂ ಸುದೀಪ್‌ ಒಂದೇ ಸಿನಿಮಾದಲ್ಲಿ ಅಭಿನಯಿಸಬೇಕು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿದ್ದು, ಇಬ್ಬರೂ ಯಾವ ಪಾತ್ರದಲ್ಲಿ ಅಭಿನಯಿಸಬೇಕು ಎಂದು ಸೂಚಿಸಿದ್ದಾರೆ.

ಸುದೀಪ್‌ ಹಾಗೂ ಜಗ್ಗೇಶ್‌ ಒಂದೇ ಸಿನಿಮಾದಲ್ಲಿ ನಟಿಸಿದರೆ, ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಸಿಗುವುದಂತೂ ಸತ್ಯ.

Leave a Reply

Your email address will not be published.

Social Media Auto Publish Powered By : XYZScripts.com