ಅಪಘಾತದಲ್ಲಿ ತುಂಡಾಯ್ತು ಯುವಕನ ಕಾಲು : ಅದನ್ನ ವೈದ್ಯರು ಇಂಥಾ ಕೆಲಸಕ್ಕೆ ಬಳಸ್ಬಿಟ್ರು..!!

ಲಖನೌ : ವೈದ್ಯೋ ನಾರಾಯಣ ಹರಿಃ ಎಂದು ಹೇಳುವ ಕಾಲವೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಪದಕ್ಕೆ ಅರ್ಥವೇ ಇಲ್ಲ ಎಂಬಂತೆ ಬಹುತೇಕ ವೈದ್ಯರು ನಡೆದುಕೊಳ್ಳುತ್ತಿದ್ದಾರೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಕಾಲನ್ನು ವೈದ್ಯರು ಕತ್ತರಿಸಿದ್ದು, ಆಸ್ಪತ್ರೆಯಲ್ಲಿ ದಿಂಬು ಇಲ್ಲ ಎಂಬ ಕಾರಣಕ್ಕೆ ಕತ್ತರಿಸಿದ ಕಾಲನ್ನೇ ಗಾಯಾಳುವಿಗೆ ದಿಂಬನ್ನಾಗಿ ನೀಡಿ ಅಮಾನವೀಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದ ಝಾನ್ಸಿ ಪ್ರದೇಶದ ಮೌರಾನ್ಪುರ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಯುವಕನ ಕಾಲಿಗೆ ಗಂಭೀರವಾಗ ಗಾಯವಾಗಿತ್ತು. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಕಾಲು ವೈದ್ಯರು ಕಾಲನ್ನು ತೆಗೆದಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ದಿಂಬು ಇಲ್ಲದ ಕಾರಣಕ್ಕೆ ಆತನ ಕಾಲನ್ನೇ ದಿಂಬಿನಂತೆ ಇಡಲಾಗಿದೆ. ಈ ದೃಶ್ಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದ್ದು, ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಯುವಕನ ಸ್ಥಿತಿ ಸ್ಥಿರವಾಗಿದ್ದು, ಆತನ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯಕೀಯ ಮೂಲಗಳು ಹೇಳಿವೆ.

 

Leave a Reply

Your email address will not be published.

Social Media Auto Publish Powered By : XYZScripts.com