ಜಮ್ಮ-ಕಾಶ್ಮೀರ : 4 ದಿನದಲ್ಲಿ ಮೂವರು ಭಾರತೀಯ ಸೈನಿಕರ ಆತ್ಮಹತ್ಯೆ

ಕೇವಲ ನಾಲ್ಕು ದಿನಗಳ ಅಂತರದಲ್ಲಿ ಭಾರತೀಯ ಸೇನೆಯ ಮೂವರು ಯೋಧರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀನಗರದ ಸೋನ್ವಾರ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್ ಪಿಎಫ್ ಪಡೆಯ 79 ಬೆಟಾಲಿಯನ್ ನ ಯೋಧ ಪೃಖಾ ಸುಖದೇವ್ ಶನಿವಾರ ಬೆಳಿಗ್ಗೆ, ತಮ್ಮ ಬಳಿಯಿದ್ದ ಸರ್ವೀಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಪ್ವಾರಾ ಜಿಲ್ಲೆಯ ರಾಷ್ಟ್ರೀಯ ರೈಫಲ್ ಕ್ಯಾಂಪಿನ ಸಿಪಾಯಿ ಬಿರೆಂದರ್ ಸಿನ್ಹಾ ಸರ್ವೀಸ್ ರೈಫಲ್ ನಿಂದ ಬುಧವಾರ ಬೆಳಿಗ್ಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಾರ್ನೊವ್ ಪ್ರದೇಶದ ರಾಷ್ಟ್ರೀಯ ರೈಫಲ್ ಕ್ಯಾಂಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 36 ವರ್ಷದ ನಾಯಕ್ ಶಂಕರ್ ಸಿಂಗ್ ತಮ್ಮದೇ ಸರ್ವೀಸ್ ರೈಫಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯೋಧರ ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ, ಪೋಲೀಸರ ತನಿಖೆ ಜಾರಿಯಲ್ಲಿದೆ.

 

Leave a Reply

Your email address will not be published.