ಸಿದ್ದರಾಮಯ್ಯ ಅಲ್ಲ ಸಿದ್ದರಾವಣ ಎಂದು CM ಹೆಸರು ಬದಲಿಸಿಕೊಳ್ಳಲಿ : ಪ್ರತಾಪ್‌ ಸಿಂಹ ವ್ಯಂಗ್ಯ

ಮೈಸೂರು : ಸಿಎಂ ಸಿದ್ದರಾಮಯ್ಯ ತಮ್ಮ ಹೆಸರನ್ನು ಸಿದ್ದರಾವಣ ಎಂದು ಬದಲಿಸಿಕೊಳ್ಳಲಿ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ರಾವಣನ ಗುಣಗಳು ಹೆಚ್ಚಾಗಿವೆ. ಎಲ್ಲಾ ವಿಚಾರಕ್ಕೂ ನಾನು, ನನ್ನದು, ನನ್ನಿಂದಲೇ, ನಾನೇ ಎಂದು ರಾವಣ ಹೇಳುತ್ತಿದ್ದ. ಅದೇ ರೀತಿ ಸಿದ್ದರಾಮಯ್ಯ ಸಹ ಹೇಳುತ್ತಿದ್ದಾರೆ. ಆದ್ದರಿಂದ ರಾವಣನಿಗೂ ಸಿದ್ದರಾಮಯ್ಯನವರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಆದ್ದರಿಂದ ತಮ್ಮ ಹೆಸರನ್ನು ಬದಲಿಸಿಕೊಳ್ಳಲಿ ಎಂದಿದ್ದಾರೆ.

ಶನಿವಾರವಷ್ಟೇ ಸಿಎಂ ಸಿದ್ದರಾಮಯ್ಯ ಮೈಸೂರು ಮಹರಾಜರ ಬಳಿಕ ಮೈಸೂರಿಗೆ ಹೆಚ್ಚಿನ ಕೊಡುಗೆ ನೀಡಿದ್ದು ನಾನೇ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. ಈ ಹೇಳಿಕೆಯನ್ನು ವಿರೋಧಿಸಿರುವ ಪ್ರತಾಪ್‌ ಸಿಂಹ, ಸಿದ್ದರಾಮಯ್ಯನವರ ದರ್ಪ ಸದ್ಯದಲ್ಲೇ ಕೊನೆಯಾಗಲಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com