ಕೇಂದ್ರ ಸರ್ಕಾರದ GSTಯನ್ನು ಕಸದ ಬುಟ್ಟಿಗೆ ಎಸೆಯಿರಿ : ಕಮಲ್‌ ಹಾಸನ್‌

ಚೆನ್ನೈ : ನಟ, ರಾಜಕಾರಣಿ ಕಮಲ್‌ ಹಾಸನ್‌ ಕೇಂದ್ರ ಸರ್ಕಾರದ ಜಿಎಸ್‌ಟಿ ವಿರುದ್ಧ ಕಿಡಿಕಾರಿದ್ದಾರೆ. ಜಿಎಸ್‌ಟಿ ಎಲ್ಲಾ ವಲಯಗಳ ಮೇಲೂ ದುಷ್ಪರಿಣಾಮ ಬೀರಿದ್ದು, ಅದನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದಿದ್ದಾರೆ.
ಈರೋಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನೋಟ್‌ಬ್ಯಾನ್‌ ಕ್ರಮ ಸರಿಯಿದೆ. ಆದರೆ ಅದನ್ನು ಜಾರಿಗೆ ತಂದ ರೀತಿ ಸರಿಯಿಲ್ಲ. ಅದನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
 ಯುವಕರಿಗಾಗಿ ಫಲವತ್ತಾದ ಭೂಮಿ ಕೈಬೀಸಿ ಕರೆಯುತ್ತಿದೆ. ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com