ಶಾರುಕ್‌ ಖಾನ್‌ ಮನೆಗೆ ನುಗ್ಗಿ ಬಟ್ಟೆ ಬಿಚ್ಚಿದ ಹುಚ್ಚು ಅಭಿಮಾನಿ ಮಾಡಿದ್ದೇನು…?

ಮುಂಬೈ : ಬಾಲಿವುಡ್‌ ಹ್ಯಾಂಡ್‌ಸಮ್‌ ಹೀರೋ ಶಾರುಕ್ ಖಾನ್‌ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ವಿಭಿನ್ನ ಅಭಿನಯದ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಪಡೆದಿರುವ ಶಾರುಕ್‌ ಖಾನ್‌, ಸಖತ್‌ ಫೇಮಸ್‌ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅಲ್ಲದೆ ಅವರ ಮಾತು, ನಟನೆಗೆ ಫಿದಾ ಆದವರು ಶಾರುಕ್‌ನನ್ನು ಒಮ್ಮೆಯಾದರೂ ನೋಡಬೇಕೆಂಬ ಆಸೆ ಹೊತ್ತಿರುತ್ತಾರೆ.

ಆದರೆ ಮುಂಬೈನಲ್ಲಿ ಶಾರುಕ್‌ರ ಹುಚ್ಚು ಅಭಿಮಾನಿಯೊಬ್ಬ ಶಾರುಕ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ಅವರ ಬಳಿ ಆಟೋಗ್ರಾಫ್‌, ಫೋಟೋ ಏನೂ ಕೇಳದೆ ಶರ್ಟ್‌ ಕಳಚಿ ನೇರವಾಗಿ ಸ್ವಿಮ್ಮಿಂಗ್‌ ಪೂಲ್‌ಗೆ ಹಾರಿದ್ದ. ಬಳಿಕ ಭದ್ರತಾ ಸಿಬ್ಬಂದಿ ಬಂದು ಆತನನ್ನು ಸ್ವಿಮ್ಮಿಂಗ್‌ ಪೂಲ್‌ನಿಂದ ಮೇಲೆತ್ತಿ, ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದಾಗ, ಪ್ರತಿನಿತ್ಯ ಶಾರುಕ್‌ ಸ್ನಾನ ಮಾಡುವ  ನೀರಿನಲ್ಲಿ ನಾನೂ ಸ್ನಾನ ಮಾಡಬೇಕು ಎಂಬುದೇ ನನ್ನ ಆಸೆಯಾಗಿತ್ತು ಎಂದಿದ್ದನಂತೆ. ಇದನ್ನು ಕೇಳಿ ಶಾರುಕ್‌ ಸಹ ದಂಗಾಗಿದ್ದರು ಎಂದು ಇತ್ತೀಚೆಗಷ್ಟೇ ಶಾರುಕ್ ಶಾನ್‌ ಬ್ರಿಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com