ಬೆಂಗಳೂರಿಗೆ ರೇಪ್‌ ಸಿಟಿ ಎಂಬ ಹೆಸರು ಬಂದಿದ್ದು ಸಿದ್ದರಾಮಯ್ಯ ಕಾಲದಲ್ಲೇ : ಅನಂತ್‌ ಕುಮಾರ್‌

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ ಬಿಹಾರದ ಲಾಲೂ ಪ್ರಸಾದ್‌ ಯಾದವ್‌ ಸರ್ಕಾರದಂತೆ ಜಂಗಲ್ ರಾಜ್‌ ಆಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿಗೆ ರೇಪ್‌ ಸಿಟಿ ಎಂಬ ಹೆಸರು ಬಂದಿರುವುದು ಸಿದ್ದರಾಮಯ್ಯ ಅವರ  ಕಾಲದಲ್ಲೇ ಎಂದು ಆರೋಪಿಸಿದ್ದು, ಸುಳ್ಳು ಅಂಕಿ ಅಂಶಗಳನ್ನು ನೀಡಿದರೆ ಜನರು ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜನರೇ ನಿಮಗೆ ತಕ್ಕ ಶಾಸ್ತಿ ಮಾಡುತ್ತಾರೆ. ಅಲ್ಲಿಯವರೆಗೆ ಕಾಯಬೇಕು ಎಂದಿದ್ದಾರೆ.

ಬಿಜೆಪಿಯಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ ನಡೆಯುತ್ತಿದೆ. ಬೆಂಗಳೂರನ್ನು ರಕ್ಷಣೆ ಮಾಡುವ ಬಿಜೆಪಿಯನ್ನು ಜನರೇ ಆಯ್ಕೆ ಮಾಡುತ್ತಾರೆ ಎಂದು ಅನಂತ್ ಕುಮಾರ್‌ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com