kolkata : ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ…….ಕಾರಣವೇನು ?

ಕೋಲ್ಕತ್ತಾ : ನಗರದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿನ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಿರುತೆರೆ ನಟಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ನಟಿಯನ್ನು ಮೌಮಿತ (23) ಎಂದು ಹೆಸರಿಸಲಾಗಿದ್ದು, ಕೋಲ್ಕತ್ತಾದ ಅಶೋಕ ನಗರದ ಫ್ಲಾಟ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ನಟಿ ವಾಸವಿದ್ದ ಫ್ಲಾಟ್‌ನ ಬಾಗಿಲು ಶುಕ್ರವಾರ ಮಧ್ಯಾಹ್ನದಿಂದ ಮುಚ್ಚಿತ್ತು. ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಕೋಣೆಯ ಫ್ಯಾನ್‌ನಲ್ಲಿ ನಟಿಯ ಮೃತದೇಹ ಪತ್ತೆಯಾಗಿದೆ.

ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಅಲ್ಲದೆ ಕೋಣೆಯಲ್ಲಿ ಡೆತ್‌ನೋಟ್‌ ಸಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.  ಮೌಮಿತ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

 

Leave a Reply

Your email address will not be published.