ರಾಜಕೀಯಕ್ಕೆ ಶಿರೂರು ಶ್ರೀ ಎಂಟ್ರಿ : ಟಿಕೆಟ್ ಸಿಕ್ಕರೆ BJPಯಿಂದಲೇ ಸ್ಪರ್ಧೆ..!

ಉಡುಪಿ : ಮುಂದಿನ ವಿಧಾನಸಭೆಯಲ್ಲಿ ಬಜೆಪಿಯಿಂದ ಟಿಕೆಟ್‌ ಸಿಕ್ಕರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷೇತರನಾಗಿಯಾದರೂ ಚುನಾವಣೆಗೆ ಸ್ಪರ್ಧಿಸುವುದಾಗಿ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನಾನು ರಾಜಕೀಯಕ್ಕಿಳಿಯಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ಫೂರ್ತಿ ಎಂದದ್ದಾರೆ. ಉಡುಪಿಯ ರಾಜಕೀಯ ವ್ಯವಸ್ಥೆ ಹಾಳಾಗಿದೆ. ಆದ್ದರಿಂದ ಸಕ್ರಿಯ ರಾಜಕಾರಣಕ್ಕೆ ಬರುವ ಮನಸ್ಸು ಮಾಡಿದ್ದೇನೆ. ವ್ಯವಸ್ಥೆ ಸರಿಯಿದ್ದರೆ ನಾನು ಈ ನಿರ್ಧಾರ ಮಾಡುತ್ತಿರಲಿಲ್ಲ. ರಾಜಕೀಯಕ್ಕೆ ಇಳಿಯುವ ಬಗ್ಗೆ ಯೋಚಿಸಿಯೇ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

ಕರ್ನಾಟಕ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಉತ್ತಮ ಕೆಲಸ ಮಾಡುತ್ತಿದೆ. ಆದರೆ ಉಡುಪಿ ರಾಜಕೀಯ ಸರಿಯಿಲ್ಲ. ಅಧಿಕಾರಕ್ಕೆ ಬಂದರೆ ಮೊದಲು ಪಕ್ಷವನ್ನು ರಿಪೇರಿ ಮಾಡುವುದಾಗಿ ಹೇಳಿದ್ದಾರೆ. ನಾನು ರಾಜಕೀಯ ಪ್ರವೇಶ ಮಾಡುತ್ತಿರುವುದರ ಕುರಿತು ಅಷ್ಟಮಠಗಳ ಯತಿಗಳಿಂದ ಯಾವುದೇ ಸಲಹೆ ಪಡೆದಿಲ್ಲ. ರಾಜಕೀಯ ಸ್ಪರ್ಧೆಯಿಂದ ಸನ್ಯಾಸತ್ವಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಶಾಸಕನಾದರೆ ಇಲ್ಲೇ ಇದ್ದು ಜನರ ಸೇವೆ ಮಾಡುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com