ರಾಜಕೀಯ ಗುರು ಅಡ್ವಾಣಿಗೆ ಅವಮಾನ ಮಾಡಿದ ಶಿಷ್ಯ ಮೋದಿ : ವಿಡಿಯೋ Viral

ಅಗರ್ತಲಾ: ತ್ರಿಪುರಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಶುಕ್ರವಾರ ನಡೆದ ಸಮಾರಂಭದಲ್ಲಿ ತ್ರಿಪುರಾದ ನೂತನ ಸಿಎಂ ಆಗಿ ಬಿಪ್ಲಬ್‌ ದೇಬ್‌ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲೇ ಇದ್ದ ಅಮಿತ್ ಶಾ, ರಾಜ್‌ನಾಥ್‌ ಸಿಂಗ್‌ ಅವರಿಗೆ ಕೈ ಮುಗಿದು ನಮಸ್ಕರಿಸಿದರು. ನಂತರ ನಿಂತಿದ್ದ ಅಡ್ವಾಣಿ, ಮೋದಿಯವರಿಗೆ ಕೈ ಮುಗಿದರೂ ಮೋದಿ ಅವರ ಕಡೆ ತಿರುಗಿಯೂ ನೋಡದೆ ಮುನ್ನಡೆದು ತ್ರಿಪುರಾದ ಮಾಜಿ ಸಿಎಂ ಮಾಣಿಕ್‌ ಸರ್ಕಾರ್‌ ಅವರ ಕೈ ಹಿಡಿದು ಮಾತನಾಡಿಸಿ, ಬಳಿಕ ಇನ್ನುಳಿದ ನಾಯಕರಿಗೆ ಕೈಮುಗಿದಿದ್ದರು.
ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಎಲ್ಲರಿಗೂ ನಮಸ್ಕರಿಸಿ, ತನ್ನ ಗುರುವಿಗೆ ನಮಸ್ಕರಿಸದೆ, ಕನಿಷ್ಠ ಪಕ್ಷ ಅವರತ್ತ ಮುಖ ತಿರುಗಿಸದೇ ನಡೆದ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಒಂದೆಡೆ ಬಿಜೆಪಿ ಕಾರ್ಯಕರ್ತರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಮೋದಿ ಕಾಂಗ್ರೆಸ್ಸಿಗರ ಬಾಯಿಗೆ ಆಹಾರವಾಗಿದ್ದಾರೆ.
ಅಡ್ವಾಣಿಯವರ ಕೃಪಾಕಟಾಕ್ಷದಿಂದ ರಾಜಕೀಯ ರಂಗದಲ್ಲಿ ಬೆಳೆದು ಬಂದ ನರೇಂದ್ರ ಮೋದಿ ಬಿಜೆಪಿಯ ಭೀಷ್ಮನಿಗೆ ಈ ರೀತಿ ಅವಮಾನಿಸಬಾರದಿತ್ತು ಎಂದು ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.