ಒಬ್ಬಂಟಿಯಾಗಿ ಹೋಗ್ತಿದ್ಲು ಬಾಲಕಿ….ಇದನ್ನು ನೋಡಿದ ಅಂಕಲ್‌ ಮಾಡಿದ್ದೇನು…?

ಶಿರಸಿ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಥವಾ ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದೇ ಕಷ್ಟ ಎಂಬ ಪರಿಸ್ಥಿತಿ ಬಂದೊದಗಿದೆ. ಅಂತೆಯೇ ಶಾಲೆಯಿಂದ‌ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನಿಸಿದ ಘಟನೆ ಶಿರಸಿಯ ಸಿದ್ಧಾಪುರ ತಾಲಲೂಕಿನ ದೊಡಮನೆ ಗ್ರಾಮದಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ನಾಗೇಶ್‌ ರಾಮಚಂದ್ರ ನಾಯ್ಕ್‌ (35) ಎಂದು ಹೆಸರಿಸಲಾಗಿದ್ದು, ಗ್ರಾಮಸ್ಥರೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶುಕ್ರವಾರ ಸಂಜೆ 12 ವರ್ಷದ ಬಾಲಕಿ ಮನೆಗೆ ತೆರಳುತ್ತಿದ್ದು, ಈ ವೇಳೆ ಬಾಲಕಿ ಒಬ್ಬಂಟಿಯಾಗಿ ಹೋಗುತ್ತಿದ್ದುದನ್ನು ನೋಡಿದ ಕಾಮುಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕೂಡಲೆ ಕೂಗಿಕೊಂಡು ಓಡಿಹೋಗಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮದವರು ತಮ್ಮ ಮುಂದಿನ ಗ್ರಾಮದವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪಕ್ಕದ ಗ್ರಾಮದವರು ಬೈಕ್‌ನಲ್ಲಿ ತೆರಳುತ್ತಿದ್ದ ಆರೋಪಿಯನ್ನು ಅಡ್ಡಗಟ್ಟಿ ಹಿಡಿದಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published.