ಮೈಸೂರು ರಾಜರ ನಂತರ ಹೆಚ್ಚು ಕೊಡುಗೆ ನೀಡಿದ್ದು ನಮ್ಮ ಸರ್ಕಾರ : CM ಸಿದ್ದರಾಮಯ್ಯ

ಮೈಸೂರು :  ಮೈಸೂರಿನ ಇತಿಹಾಸದಲ್ಲೇ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ‌. ಮೈಸೂರು ರಾಜರ‌ ನಂತರ ಹೆಚ್ಚು ಕೊಡುಗೆ ನೀಡಿದ ಸರ್ಕಾರ ನಮ್ಮದು. ನಾವು ಮಾಡಿರುವ ಕೊಡುಗೆ ನಿಮ್ಮ‌ ಕಣ್ಣ ಮುಂದೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು ನಾವು ನಿಮಗೆ ಕಣ್ಣು ಕಟ್ಟುವ ಮಾತು ಹೇಳುತ್ತಿಲ್ಲ. ಐದು ವರ್ಷದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದ್ದೇವೆ. ದೇವರಾಜ ಅರಸು ನಂತರ ಮೈಸೂರಿನ ಎರಡನೇ‌ ಮುಖ್ಯಮಂತ್ರಿ ನಾನೇ. ಇಷ್ಟೆಲ್ಲಾ ಅವಕಾಶ ನನಗೆ ದೊರೆಯಲು ನಿಮ್ಮ‌ ಸಹಕಾರ, ಪ್ರೀತಿ ಕಾರಣ ಎಂದಿದ್ದಾರೆ.
ಇದೇ ವೇಳೆ ಬಿಪಿಎಲ್ ಕಾರ್ಡುದಾರರಿಗೆ ಮುಂದಿನ ದಿನಗಳಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡುವುದಾಗಿ ಹೇಳಿದ್ದು, ಸುಮಾರು 1 ಕೋಟಿ 23 ಲಕ್ಷ ಕುಟುಂಬಗಳಿಗೆ ಈ ಯೋಜನೆ ಅನ್ವಯಿಸಲಿದೆ. ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಸವಲತ್ತು ಸಿಗದಿದ್ರೆ ಸರ್ಕಾರಿ ಹಣದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಯೋಜನೆ ಇದಾಗಿದೆ. ಅಲ್ಲದೆ ಎಪಿಎಲ್‌ ಕಾರ್ಡುದಾರರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 30%. ಉಚಿತ ಚಿಕಿತ್ಸೆ ಸಿಗಲಿದೆ. ಅಲ್ಲದೆ ಹಣ ನೀಡಿದರೆ ಮಾತ್ರ ಹೆಣ ಕೊಡುತ್ತೇವೆ ಎಂದು ಯಾವ ಆಸ್ಪತ್ರೆಯೂ ಹೇಳುವಂತಿಲ್ಲ. ಒಂದು ವೇಳೆ ಹಾಗೆ ಹೇಳಿದರೆ ಅವರ ವಿರುದ್ದ ಪ್ರಕರಣ ದಾಖಲಿಸಬಹುದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com