ಪತ್ನಿಯ ಅಗಲಿಕೆಯಿಂದ ಮನನೊಂದ ಪತಿ, ಅದೆಂಥಾ ಕೆಲಸ ಮಾಡ್ಬಿಟ್ಟ…?

ಮಂಡ್ಯ : ಅದೆಷ್ಟೋ ಮಂದಿ ಹೆಂಡತಿ ಎಂದರೆ ಸಾಕು ಶನಿ ಎಂದು ಜರೆಯುವವರಿದ್ದಾರೆ. ಇನ್ನು ಕೆಲವರು ಹೆಂಡತಿಯೇ ಜೀವ ಎನ್ನುವಷ್ಟು ಪ್ರೀತಿಸುವವರೂ ಇದ್ದಾರೆ. ಹೆಂಡತಿಯ ಮೇಲಿನ ಪ್ರೀತಿಗಾಗಿ ತಾಜ್‌ ಮಹಲ್ಲನ್ನೇ ಕಟ್ಟಿಸಿದ ಶಹಜಹಾನ್‌ ಪ್ರೀತಿಗೆ ಉದಾಹರಣೆಯಾಗಿದ್ದಾನೆ. ಆದರೆ ಹೆಂಡತಿಯ ಮೇಲಿನ ಪ್ರೀತಿಗೆ ಮಂಡ್ಯದಲ್ಲಿ ವ್ಯಕ್ತಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಪತ್ನಿಯ ಅಗಲಿಕೆಯಿಂದ ಮನನೊಂದ ವ್ಯಕ್ತಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.ಮೃತರನ್ನು ರಾಮಚಂದ್ರರಾವ್‌ ಎಂದು ಹೆಸರಿಸಲಾಗಿದೆ. ಮೃತರ ಶವ ಬೆಳಗ್ಗೆ ಕೆರೆಯಲ್ಲಿ ತೇಲುತ್ತಿದ್ದುದನ್ನು ಗಮನಿಸಿದ ದಾರಿಹೋಕರು ಶವವನ್ನು ಮೇಲೆತ್ತಿದ್ದಾರೆ. ಶವದ ಜೊತೆ ಡೆತ್‌ ನೋಟ್‌, ಬಸ್‌ ಪಾಸ್‌, ಗುರುತಿಸ ಚೀಟಿ ಸಹ ಪತ್ತೆಯಾಗಿದ್ದು, ನನ್ನ ಪತ್ನಿಯ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮಗ ಸೊಸೆ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇದರಲ್ಲಿ ಅವರದ್ದೇನೂ ತಪ್ಪಿಲ್ಲ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

 

Leave a Reply

Your email address will not be published.