Football : ಬಾರ್ಸಿಲೋನಾ ತಂಡಕ್ಕೆ ಮರಳುವ ತವಕದಲ್ಲಿ ನೆಯ್ಮರ್..?

ಸದ್ಯ ಪ್ಯಾರಿಸ್ ಸೇಂಟ್ ಜರ್ಮನ್ (PSG) ತಂಡದ ಸದಸ್ಯರಾಗಿರುವ ಸ್ಟಾರ್ ಫುಟ್ಬಾಲ್ ಆಟಗಾರ ನೆಯ್ಮರ್ ಜೂನಿಯರ್, ತಮ್ಮ ಹಳೆಯ ತಂಡ ಬಾರ್ಸಿಲೋನಾಗೆ ಮರಳಲು ಬಯಸಿದ್ದಾರೆ ಎಂದು ಸ್ಪ್ಯಾನಿಷ್ ಮಾಧ್ಯಮಗಳು ವರದಿ ಮಾಡಿವೆ.

ಪಾದದ ಸರ್ಜರಿಗೊಳಗಾಗಿರುವ ಬ್ರೆಜಿಲ್ ಫುಟ್ಬಾಲ್ ಆಟಗಾರ ನೆಯ್ಮರ್, ಬಾರ್ಸಿಲೋನಾಕ್ಕೆ ಮರಳುವ ಬಗ್ಗೆ ಯೋಚಿಸಿದ್ದು ತಂಡದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಸ್ಪ್ಯಾನಿಷ್ ಪತ್ರಿಕೆ ಮುಂಡೋ ಡಿಪೋರ್ಟಿವೊ ವರದಿ ಮಾಡಿದೆ.

Image result for neymar return barcelona messi

‘ ನಾನು ಬಾರ್ಸಿಲೋನಾ ತ್ಯಜಿಸುವ ನಿರ್ಧಾರ ತೆಗೆದುಕೊಂಡು ತಪ್ಪು ಮಾಡಿದೆ, ಮೆಸ್ಸಿಯಿಂದ ಸ್ವತಂತ್ರವಾಗಬೇಕು ಅಂದುಕೊಂಡು ತಪ್ಪಾಯಿತು ‘ ಎಂದು ನೆಯ್ಮರ್ ಹೇಳಿದ್ದಾರೆ ಎಂದು ಪತ್ರಿಕೆಯ ಲೇಖನದಲ್ಲಿ ಬರೆಯಲಾಗಿದೆ. 7 ತಿಂಗಳ ಹಿಂದೆ ಪಿ ಎಸ್ ಜಿ ಫ್ರಾಂಚೈಸಿ 222 ಮಿಲಿಯನ್ ಯುರೋಗಳನ್ನು ನೀಡಿ ನೆಯ್ಮರ್ ಜೂನಿಯರ್ ಅವರನ್ನು ಖರೀದಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com