ದಲಿತರ ಪ್ರತಿಭಟನೆಗೆ ಹೆದರಿ ಹಿಂಬಾಗಿಲ ದಾರಿ ಹಿಡಿದ ಅನಂತ್‌ ಕುಮಾರ್‌ ಹೆಗಡೆ

ಹುಬ್ಬಳ್ಳಿ : ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ವಿರುದ್ಧ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಇಂದು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೆಗಡೆ ಅವರ ಫ್ಲೆಕ್ಸ್‌ಗೆ ಮಸಿಬಳಿದಿರುವ ಘಟನೆ ವಿದ್ಯಾನಗರದ ದೈವಜ್ಞ ಕಲ್ಯಾಣ ಮಂದಿರದ ಬಳಿ ನಡೆದಿದೆ.

ದೈವಜ್ಞ ಬ್ರಾಹ್ಮಣ ಸಮಾಜ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಸಾಧನೆ ಮಾಡಿದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.‌ಇದಕ್ಕೆ ಸ್ವಾಗತ ಕೋರುವ ಪ್ಲೆಕ್ಸ್ ಗಳನ್ನು ಕಲ್ಯಾಣ ಮಂಟಪದ ಎದುರು ಹಾಕಲಾಗಿತ್ತು. ಆದರೆ ಅನಂತಕುಮಾರ್ ಅವರ ಬರುವಿಕೆಯನ್ನ ಖಂಡಿಸಿ ದಲಿತಪರ ಸಂಘಟನೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ನಡೆಸಲು ಮುಂದಾಗಿದ್ದು, ಈ ವೇಳೆ ಮುನ್ನಚ್ವರಿಕೆ ಕ್ರಮವಾಗಿ ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿದರು. ಆ ಹಿನ್ನಲೆ ಆಕ್ರೋಶಗೊಂಡ ಕೆಲವರು ಪ್ಲೆಕ್ಸ್ ಗೆ ಕಪ್ಪು ಮಸಿ ಎರಚಿದ್ದಾರೆ.

ಪ್ರತಿಭಟನೆಗೆ ಹೆದರಿದ ಹೆಗಡೆ
ದಲಿತ ಪರ ಸಂಘಟನೆಯ ಪ್ರತಿಭಟನೆಗೆ ಹೆದರಿದ ಅನಂತಕುಮಾರ ಹೆಗಡೆ ಹಿಂಬಾಗಿಲಿನಿಂದ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು. ಬೆಂಗಾವಲು ಪಡೆ ಬಿಟ್ಟು ಕಾಲ್ನಡಿಗೆಯ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com