ಲ್ಯಾಂಬೋರ್ಗಿನಿ ಆಯ್ತು ಈಗ ‘ಯಜಮಾನ’ ದರ್ಶನ್‌ ಮನೆ ಮುಂದೆ ಬಂದು ನಿಂತಿದೆ ಜಿಪ್ಸಿ

ಬೆಂಗಳೂರು : ಸಿನಿಮಾ ಇಂಡಸ್ಟ್ರಿಗೆ ಬಂದ ಹೊಸತರಲ್ಲಿ ಮಾರುತಿ 800 ಕಾರು ಖರೀದಿಸಲು ಸಾಧ್ಯವಿಲ್ಲದೆ ನಿರಾಸೆಯಿಂದ ವಾಪಸ್ಸಾಗಿದ್ದ ನಟ ದರ್ಶನ್‌ ಮನೆಯ ಮುಂದೆ ಇಂದು ಸಾಲು ಸಾಲು ಕಾರುಗಳು ನಿಂತಿವೆ. ಕಳೆದ 1 ತಿಂಗಳ ಹಿಂದಷ್ಟೇ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ಚಾಲೆಂಜಿಂಗ್‌ ಸ್ಟಾರ್‌ ಮನೆಗೀಗ ಜಿಪ್ಸಿ ಎಂಟ್ರಿ ಕೊಟ್ಟಿದೆ. ಹೌದು ನಟ ದರ್ಶನ್‌ ಹೊಸ ಜಿಪ್ಸಿ ಖರೀದಿಸಿದ್ದಾರಂತೆ. ಈಗಾಗಲೆ ದರ್ಶನ್‌ ಅಭಿಮಾನಿಗಳು ದರ್ಶನ್‌ ಖರೀದಿಸಿರುವ ಜಿಪ್ಸಿಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಾರೆ.

ದರ್ಶನ್‌ ಬಳಿ ಈಗಾಗಲೆ ಜಾಗ್ವಾರ್‌,  ಆಡಿ, ಐ-20, ರೇಂಜ್‌ ರೋವರ್‌, ಫಾರ್ಚೂನರ್‌ ಸೇರಿದಂತೆ ಅನೇಕ ಕಾರುಗಳಿವೆ. ಈಗ ಆ ಸಾಲಿಗೆ ಜಿಪ್ಸಿ ಸಹ ಸೇರ್ಪಡೆಯಾಗಿದೆ.

ಕಳೆದ ತಿಂಗಳು ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಬಳಿಕ ದರ್ಶನ್‌, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದರು. ಅಲ್ಲದೆ ದರ್ಶನ್‌ ಅವರ ಕಾರನ್ನು ನೋಡಲು ನಟರ ದಂಡೇ ದರ್ಶನ್‌ ಮನೆಯಲ್ಲಿ ಜಮಾಯಿಸಿತ್ತು. ಇದಾದ ಬಳಿಕ ದರ್ಶನ್‌ ಹುಟ್ಟುಹಬ್ಬದಂದು ನಿರ್ಮಾಪಕ ರಾಮಮೂರ್ತಿ ದರ್ಶನ್‌ ಅವರಿಗೆ ಮಾರುತಿ 800 ಕಾರನ್ನು ಗಿಫ್ಟ್ ನೀಡಿದ್ದರು. ಇದಾದ ಬಳಿಕ ಈಗ ಜಿಪ್ಸಿ ಸಹ ದರ್ಶನ್‌ ಮನೆಯಂಗಳದಲ್ಲಿ ಬಂದು ನಿಂತಿದೆ.

 

Leave a Reply

Your email address will not be published.