ಗಾಂಧಿ ಕುಟುಂಬದವರಲ್ಲದೆ ಬೇರೆಯವರೂ ಕಾಂಗ್ರೆಸ್‌ ಅಧ್ಯಕ್ಷರಾಗಬಹುದು : ಸೋನಿಯಾ ಗಾಂಧಿ

ದೆಹಲಿ : ಮುಂಬರುವ ದಿನಗಳಲ್ಲಿ ನೆಹರೂ ಅಥವಾ ಗಾಂಧಿ ಕುಟುಂಬದವರನ್ನು ಹೊರತು ಪಡಿಸಿ ಹೊರಗಿನವರೂ ಜವಾಬ್ದಾರಿ ವಹಿಸಿಕೊಳ್ಳಬಹುದು ಎಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಮುಂದಿನ ದಿನಗಳಲ್ಲಿ ಗಾಂಧಿ ಅಥವಾ ನೆಹರೂ ಕುಟುಂಬದ ಹೊರಗಿನವರೂ ಕಾಂಗ್ರೆಸ್‌ ಅಧ್ಯಕ್ಷರಾಗಿ ಬರಬಹುದು. ಈ ಬಗ್ಗೆ ಕಾರ್ಯಕರ್ತರೇ ನಿರ್ಧರಿಸಲಿ ಎಂದಿದ್ದಾರೆ. ಪ್ರಜಾಪ್ರಭುತ್ವದ ಹಿನ್ನೆಲೆಯನ್ನಿಟ್ಟುಕೊಂಡೇ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲೂ ವಂಶಪಾರಂಪರ್ಯ ಆಡಳಿತವಿತ್ತು. ಬುಷ್‌, ಕ್ಲಿಂಟನ್‌ ಕುಟುಂಬ ಸಹ ವಂಶ ರಾಜಕಾರಣ ಮಾಡಿದ್ದರು ಎಂದಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2004ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸುವಾಗ ನಾನೇ ಮನಮೋಹನ್‌ ಸಿಂಗ್ ಅವರ ಹೆಸರನ್ನು ಸೂಚಿಸಿದ್ದೆ. ಪ್ರಧಾನಿಯಾಗಲು ನನಗಿಂತ ಅವರೇ ಹೆಚ್ಚು ಸಮರ್ಥರು ಎನಿಸಿತ್ತು. ಅದಕ್ಕೆ ಅವರ ಹೆಸರನ್ನು ಸೂಚಿಸಿದ್ದೆ. ರಾಜಕೀಯದಲ್ಲಿ ನನ್ನ ಇತಿಮಿತಿ ಏನೆಂಬುದು ನನಗೆ ತಿಳಿದಿತ್ತು. ಹಾಗಾಗಿ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಹೆಸರು ಸೂಚಿಸಿದ್ದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com