ಇನ್ಮುಂದೆ 50 ಕೋಟಿಗೂ ಅಧಿಕ ಸಾಲ ಪಡೆಯಲು ಪಾಸ್‌ಪೋರ್ಟ್‌ ಕಡ್ಡಾಯ

ದೆಹಲಿ : ಸಾವಿರಾರು ಕೋಟಿ ಸಾಲ ಮಾಡಿ ಬಳಿಕ ವಿದೇಶಕ್ಕೆ ಪರಾರಿಯಾಗುತ್ತಿರುವ ಉದ್ಯಮಿಗಳಿಂದ ಸರ್ಕಾರ ರೋಸಿ ಹೋಗಿದ್ದು, ಈಗ 50 ಕೋಟಿಗಿಂತ ಹೆಚ್ಚು ಸಾಲ ಪಡೆಯುವವರು ಪಾಸ್‌ ಪೋರ್ಟ್‌ ಮಾಹಿತಿ ಹಂಚಿಕೊಳ್ಳುವಂತೆ ಆದೇಶ ಹೊರಡಿಸಿದೆ.

ಯಾವುದೇ ಬ್ಯಾಂಕ್‌ನಿಂದ 50 ಕೋಟಿಗೂ ಅಧಿಕ ಸಾಲ ಪಡೆಯಲು ಪಾಸ್ಪೋರ್ಟ್ ಕಡ್ಡಾಯ ಮಾಡಿದ್ದು, ಈ ರೀತಿ ಮಾಡುವುದರಿಂದ ಬ್ಯಾಂಕ್‌ಗಳು ಸೂಕ್ತ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುವುದರಿಂದ ಮೋಸವನ್ನು ತಡೆಗಟ್ಟಬಹುದು. ಅಲ್ಲದೆ ಇದರಿಂದ ಸ್ವಚ್ಛ ಬ್ಯಾಂಕಿಂಗ್ ವ್ಯವಹಾರ ಮಾಡಲು ಅನುಕೂಲವಾಗುತ್ತದೆ ಎಂದು ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಈಗಾಗಲೆ 50 ಕೋಟಿಗೂ ಅಧಿಕ ಸಾಲ ಪಡೆದಿರುವವರ ಪಾಸ್‌ಪೋರ್ಟ್‌ ಮಾಹಿತಿ ಪಡೆದುಕೊಳ್ಳುವಂತೆ ಬ್ಯಾಂಕ್‌ಗಳಿಗೆ 45 ದಿನಗಳ ಕಾಲಾವಕಾಶ ನೀಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com