Shooting Worldcup : ಬೆಳ್ಳಿ ಪದಕ ಗೆದ್ದ ಭಾರತದ ಅಂಜುಮ್ ಮೌದ್ಗಿಲ್

ಮೆಕ್ಸಿಕೋದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಬೆಳ್ಳಿ ಪದಕ ಜಯಿಸಿದ್ದಾರೆ. ಮಹಿಳೆಯರ 50 ಮೀಟರ್ ರೈಫಲ್ 3 ಪೋಸಿಷನ್ ವಿಭಾಗದ ಸ್ಪರ್ಧೆಯಲ್ಲಿ ಅಂಜುಮ್ ಮೌದ್ಗಿಲ್ ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಮಹಿಳಾ ಶೂಟರ್ ಅಂಜುಮ್ ಚೋಪ್ರಾ ವಿಶ್ವಕಪ್ ನಲ್ಲಿ ಪಡೆದ ಮೊದಲ ಪದಕ ಇದಾಗಿದೆ. ಅಂಜುಮ್ ಮೌದ್ಗಿಲ್ 454.2 ಪಾಯಿಂಟ್ಸ್ ಗಳಿಸಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರು.

455.4 ಪಾಯಿಂಟ್ಸ್ ಗಳಿಸಿದ ಚೀನಾದ ರುಜಿಯಾವೊ ಪೆ ಚಿನ್ನದ ಪದಕ ಪಡೆದರು. ಚೀನಾದ ಮತ್ತೊಬ್ಬ ಮಹಿಳಾ ಶೂಟರ್ ಟಿಂಗ್ ಸುನ್ 442.2 ಪಾಯಿಂಟ್ ಸ್ಕೋರ್ ಮಾಡಿ ಕಂಚಿನ ಪದಕ ಜಯಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com