‘ವಡಾಲಿ ಬ್ರದರ್ಸ್’ ಖ್ಯಾತಿಯ ಕವ್ವಾಲಿ ಗಾಯಕ ಉಸ್ತಾದ್ ಪ್ಯಾರೆಲಾಲ್ ವಡಾಲಿ ನಿಧನ

‘ವಡಾಲಿ ಬ್ರದರ್ಸ್’ ಖ್ಯಾತಿಯ ಕವ್ವಾಲಿ ಗಾಯಕ ಪ್ಯಾರೆಲಾಲ್ ವಡಾಲಿ ಹೃದಯ ಸ್ತಂಭನದಿಂದ ಅಮೃತಸರದಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅಮೃತಸರದ ಫಾರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಪ್ಯಾರೆಲಾಲ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ಹೃದಯದ ನೋವಿನಿಂದಾಗಿ ಪ್ಯಾರೆಲಾಲ್ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಂಜಾಬಿ ಸೂಫಿ ಕವ್ವಾಲಿ ಗಾಯಕರಾಗಿದ್ದ ಪೂರನ್ ಚಂದ್ ವಡಾಲಿ ಹಾಗೂ ಪ್ಯಾರೆಲಾಲ್ ವಡಾಲಿ ಸೋದರರು ‘ವಡಾಲಿ ಬ್ರದರ್ಸ್’ ಎಂದೇ ಹೆಸರಾಗಿದ್ದರು. ವಡಾಲಿ ಸೋದರರು ಕಾಫಿಯಾನ್, ಗಜಲ್, ಭಜನ್ ಸಂಗೀತಕ್ಕೆ ಜನಪ್ರಿಯರಾಗಿದ್ದರು.

Image result for wadali brothers

ವಡಾಲಿ ಸೋದರರು ಜಲಂಧರ್ ನಲ್ಲಿರುವ ಹರಬಲ್ಲಭ್ ದೇವಾಲಯದಲ್ಲಿ ಭಜನ್ ಗಾಯಕರಾಗಿ ವೃತ್ತಿಯನ್ನು ಆರಂಭಿಸಿದ್ದರು. ಬಾಲಿವುಡ್ ಚಿತ್ರದಲ್ಲಿ ಗೀತೆಗಳನ್ನು ಹಾಡಿದ್ದಾರೆ.

Leave a Reply

Your email address will not be published.