ಗೋರಖಪುರ್ ಮತದಾರರ ಪಟ್ಟಿಯಲ್ಲಿ Delhi Boy ಕೊಹ್ಲಿ ಹೆಸರು : ಅಧಿಕಾರಿಗಳು ಶಾಕ್..!

ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತನ್ನಿಷ್ಟದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟಿದ್ದು, ಬೆಳೆದದ್ದು, ಕ್ರಿಕೆಟ್ ಆಟಗಾರನಾಗಿ ರೂಪುಗೊಂಡದ್ದು ಎಲ್ಲವೂ ರಾಜಧಾನಿ ದೆಹಲಿಯಲ್ಲಿ. ಅಂದಮೇಲೆ ದೆಹಲಿ ಮತದಾರರ ಪಟ್ಟಿಯಲ್ಲಿಯೇ ಕೊಹ್ಲಿ ಅವರ ಹೆಸರಿರಬೇಕು ಅಲ್ಲವೇ..?

ಆದರೆ ಉತ್ತರ ಪ್ರದೇಶದ ಗೋರಖಪುರ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರು ಕಾಣಿಸಿಕೊಂಡಿದೆ.  ಗೋರಖಪುರದಲ್ಲಿ ಮಾರ್ಚ್ 11 ರಂದು ಲೋಕಸಭೆ ಉಪಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ವಿರಾಟ್ ಹೆಸರು ಕಾಣಿಸಿದ್ದು, ಅಧಿಕಾರಿಗಳಿಗೆ ಆಶ್ಚರ್ಯ ಮೂಡಿಸಿದೆ.

Image result for kohli voter

Image result for kohli laugh

ಬೂತ್ ಮಟ್ಟದ ಅಧಿಕಾರಿ ಸುನಿತಾ ಚೌಬೆ ಎಂಬುವವರು ಈ ತಪ್ಪನ್ನು ಗುರುತಿಸಿ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ವಿರಾಟ್ ಗುರುತಿನ ಚೀಟಿಯ ಸಂಖ್ಯೆ RHB2231801 ಹಾಗೂ ಮತದಾರರ ಕ್ರಮಸಂಖ್ಯೆ 822 ಆಗಿದೆ.

‘ ಮತದಾರರ ಪಟ್ಟಿಯಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವ ದೃಷ್ಟಿಯಿಂದ ತನಿಖೆ ಜಾರಿಯಲ್ಲಿದೆ ‘ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪಂಕಜ್ ಶ್ರೀವಾಸ್ತವ ಅವರು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com