ತ್ರಿಪುರಾದಲ್ಲಿನ್ನು BJP ಆಡಳಿತ : ನೂತನ CM ಆಗಿ ಬಿಪ್ಲಬ್‌ ದೇಬ್‌ ಅಧಿಕಾರ ಸ್ವೀಕಾರ

ಅಗರ್ತಲಾ : ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ -ಐಪಿಎಫ್‌ಟಿ ಮೈತ್ರಿ ಸರ್ಕಾರ ರಚಿಸಿದೆ.

ತ್ರಿಪುರಾದಲ್ಲಿಂದು ನಡೆದ ಸಮಾರಂಭದಲ್ಲಿ ಬಿಪ್ಲಬ್‌ ದೇಬ್‌ ತ್ರಿಪುರಾದ ಬಿಜೆಪಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಉಪಮುಖ್ಯಮಂತ್ರಿಯಾಗಿ ಜಿಷ್ಣುದೇವ್‌ ಬರ್ಮನ್‌ ಕೂಡಾ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ತಥಾಗತ ರಾಯ್‌ ಪ್ರಮಾಣ ವಚನ ಬೋಧಿಸಿದ್ದಾರೆ.

ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ತ್ರಿಪುರಾ ಮಾಜಿ ಸಿಎಂ ಮಾಣಿಕ್‌ ಸರ್ಕಾರ್‌, ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ, ರಾಜನಾಥ್‌ ಸಿಂಗ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತ್ರಿಪುರಾ ವಿಧಾನಸಭೆಯಲ್ಲಿ 60 ಸದಸ್ಯ ಬಲವಿದ್ದು, ಬಿಜೆಪಿ 35 ಶಾಸಕರನ್ನು ಹೊಂದಿದೆ. ಐಪಿಎಫ್‌ಟಿ ಎಂಟು ಸದಸ್ಯಬಲ ಹೊಂದಿದ್ದು, ಇಂದು ತ್ರಿಪುರಾದಲ್ಲಿ ಸರ್ಕಾರ ರಚನೆಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com