WATCH : ತೇರಿ ಬಾಹೋ ಮೆ ಮರ್‌ ಜಾಯೆ ಹಮ್‌ ಎನ್ನುತ್ತಲೇ ಸಾವಿನ ಮನೆ ಸೇರಿದ ಯುವಕ..!

ಜೈಪುರ : ಸಾವು ಯಾವಾಗ, ಯಾರಿಗೆ, ಹೇಗೆ ಬರುತ್ತೆ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿಯ ಘಟನೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಜೋಧ್‌ಪುರದಲ್ಲಿ ಮದುವೆ ಕಾರ್ಯಕ್ರಮವೊಂದು ನಡೆದಿದ್ದು, ವರ ಹಾಗೂ ವಧು, ಇಬ್ಬರೂ ಡಿಡಿಎಲ್‌ಜೆ ಸಿನಿಮಾದ ತುಜೆ ದೇಖಾ ತೋ ಯೆ ಜಾನಾ ಸನಮ್ ಹಾಡಿಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ತೇರಿ ಬಾಹೋ ಮೆ ಮರ್‌ ಜಾಯೆ ಹಮ್‌ ಎನ್ನುವ ಸಾಲು ಬರುತ್ತಿದ್ದಂತೆ ವರ ಕುಸಿದು ಬಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ಕುಸಿದು ಬಿದ್ದ ಯುವಕ ಹೃದಯಾಘಾತದಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಆದರೆ ಆತನ ಜೊತೆ ನೃತ್ಯ ಮಾಡುತ್ತಿದ್ದ ಯುವತಿ, ಆತ ನಾಟಕ ಮಾಡುತ್ತಿದ್ದಾನೆ ಎಂದು ಕೊಂಡಿದ್ದಾಳೆ. ಆದರೆ ಆತ ಎಷ್ಟು ಹೊತ್ತಾದರೂ ಏಳದ ಹಿನ್ನೆಲೆಯಲ್ಲಿ ಆತನನ್ನು ಎಬ್ಬಿಸಲು ಹೋದಾಗ ಆತ ಸಾವಿಗೀಡಾಗಿರುವ ವಿಚಾರ ತಿಳಿದಿರುವುದಾಗಿ ಹೇಳಲಾಗಿದೆ

Leave a Reply

Your email address will not be published.

Social Media Auto Publish Powered By : XYZScripts.com