ಗೃಹ ಸಚಿವರು ಲಿಪ್‌ಸ್ಟಿಕ್‌, ಮೇಕಪ್‌ ಹಾಕ್ಕೊಂಡು TVಲಿ ಫೋಸ್‌ ಕೊಡೋದೇ ಆಗೋಯ್ತು : HDK

ಮೈಸೂರು:  ಲೋಕಾಯುಕ್ತರಿಗೆ ಭದ್ರತೆ ಒದಗಿಸಲು ಸಾಧ್ಯವಾಗದೇ ಇರುವುದು ರಾಜ್ಯ ಸರ್ಕಾರದ ವೈಫಲ್ಯ. ಅದನ್ನು ಮುಚ್ಚಿಕೊಳ್ಳುವ ಸಲುವಾಗಿ ಒಕ್ಕಲಿಗ ಸಮುದಾಯದ ಪೊಲೀಸ್ ಅಧಿಕಾರಿ ಯೋಗೀಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೊಸಕೋಟೆ ಗ್ರಾಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಯೋಗೀಶ್ ಅವರನ್ನು ಯಾವ ಆಧಾರದ ಮೇಲೆ ಸಸ್ಪೆಂಡ್ ಮಾಡಿದ್ದೀರಿ ಎಂದು ಪ್ರಶ್ನಿಸಿರುವ ಎಚ್‌ಡಿಕೆ, ಲೋಕಾಯುಕ್ತ ಕಚೇರಿಗೆ ಭದ್ರತೆ ಒದಗಿಸಬೇಕಾದದ್ದು ಆ ವಲಯದ ಡಿಸಿಪಿಗೆ ಸಂಬಂಧಪಟ್ಟ ಕರ್ತವ್ಯ. ಅವರನ್ನು ಬಿಟ್ಟು ನಿರ್ದಿಷ್ಟ ಸಮುದಾಯದ ಸಣ್ಣ ಅಧಿಕಾರಿ ಮೇಲೆ ಕ್ರಮ ಕೈಗೊಂಡಿದ್ದು ಯಾಕೆ. ಸಿಎಂ ಸಿದ್ದರಾಮಯ್ಯ ಅವರು ಕೆಂಪಯ್ಯ ಅವರನ್ನು ಗೃಹ ಇಲಾಖೆ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದು ರಾಜ್ಯಕ್ಕೆ ಭದ್ರತೆ ಕೊಡೋದಕ್ಕೆ ಅಲ್ಲ. ಚುನಾವಣಾ ಸಂದರ್ಭದಲ್ಲಿ ಪೊಲೀಸ್ ವಾಹನದಲ್ಲಿ ಇವರ ಪಾಪದ ಹಣ ಸಾಗಿಸುವುದಕ್ಕೆ. ಕಳೆದ ಬಾರಿ ವರುಣ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲೂ ಕೆಂಪಯ್ಯ ಅವರು ಪೊಲೀಸ್ ಕಾರಿನಲ್ಲೇ ಹಣ ಸಾಗಿಸಿದ್ದರು.ಒಂದು ಸಮುದಾಯದ ಅಧಿಕಾರಿಗಳ ಮೇಲೆ ನಿಮ್ಮ ಸಿಟ್ಟೇಕೆ  ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಜನತೆಗೆ ಭರವಸೆ ನೀಡಿದ ಕುಮಾರಸ್ವಾಮಿ, ನೀವು ಭಯ ಪಡಬೇಡಿ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನೀವು ಧೈರ್ಯವಾಗಿ ಮತಹಾಕಿ ಎಂದಿದ್ದಾರೆ. ಇದೇ ವೇಳೆ ವಸತಿ ಸಚಿವರು ಮೇಕಪ್ ಮಾಡಿಕೊಂಡು, ಲಿಪ್ ಸ್ಟಿಕ್ ಹಾಕಿಕೊಂಡು ಜಾಹೀರಾತು ಕೊಡುತ್ತಿದ್ದಾರೆ ಎಂದು ಆರೋಪಿಸಿರುವ ಎಚ್‌ಡಿಕೆ, 15 ಲಕ್ಷ ಮನೆ ಕಟ್ಟಿದ್ದೇವೆ ಅಂತ ಜಾಹೀರಾತು ಕೊಡುತ್ತಿದ್ದಾರೆ. ಆ ಜಾಹೀರಾತಿನಲ್ಲಿ ‘ಗುಡಿಸಲಾಯಿತು ಮನೆ’ ಅಂತ ಕ್ಯಾಪ್ಷನ್ ಇದೆ. ಯಾವ ಮನೆ ಗುಡಿಸಿದ್ದೀರಿ, ಎಷ್ಟು ಮನೆ ಗುಡಿಸಿದ್ದೀರಿ ಸಿದ್ದರಾಮಯ್ಯ ಅವರೇ…? ಕರ್ನಾಟಕದಲ್ಲಿ ಜಾಹೀರಾತು ಮಾಡಿಕೊಡುವವರು ಇಲ್ಲ ಅಂತ ವಿದೇಶಿ ಜಾಹೀರಾತು ಕಂಪನಿ ಅವರನ್ನು ಕರೆದುಕೊಂಡು ಬಂದು ಗೃಹ ಕಚೇರಿ ಕೃಷ್ಣದಲ್ಲಿ ಇಟ್ಟುಕೊಂಡಿರುವುದಾಗಿ ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com