ಸ್ತನಪಾನದ ಮೌಲ್ಯ ಸಾರಿದ ಗೃಹಲಕ್ಷ್ಮಿ ನಿಯತಕಾಲಿಕೆಗೆ PETAದಿಂದ ಗೌರವ

ದೆಹಲಿ : ಶಿಶುವಿಗೆ ಸ್ತನಪಾನ ಮಾಡಿಸಿ ಅದರ ಮೌಲ್ಯ ಸಾರುವ ಉದ್ದೇಶದಿಂದ ಕೆಲ ದಿನಗಳ ಹಿಂದೆ ಮುಖಪುಟದಲ್ಲಿ ಮಗುವಿಗೆ ನಟಿಯೊಬ್ಬರು ಸ್ತನಪಾನ ಮಾಡಿಸುತ್ತಿರುವ ಫೋಟೋ ಪ್ರಕಟಿಸಿದ್ದ ಗೃಹಲಕ್ಷ್ಮಿ ನಿಯತಕಾಲಿಕೆಗೆ ಪ್ರಾಣಿದಯಾ ಸಂಘ ಪೆಟಾ ಗೌರವ ಸಲ್ಲಿಸಿದೆ.
ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ, ಗೃಹಲಕ್ಷ್ಮಿ ನಿಯತಕಾಲಿಕೆಗೆ ಗೌರವ ಸೂಚಿಸಿದ್ದು, ಸಂಸ್ಥೆಯಿಂದ ನೀಡಲಾಗುವ ಗುಡ್‌ ಮದರ್‌ -2018 ಪ್ರಶಸ್ತಿಯನ್ನು ನೀಡಿದೆ. ಈ ಕುರಿತು ಪೆಟಾ ವಕ್ತಾರೆ ನೇಹಾ ಸಿಂಗ್ ಪ್ರತಿಕ್ರಿಯಿಸಿದ್ದು, ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗೂ, ನವಜಾತ ಶಿಶುವಿಗೂ ತಾಯಿಯ ಹಾಲು ಅತ್ಯಗತ್ಯ. ಇಂತಹ ಅಗತ್ಯ ಸಾರುವ, ಮಹಿಳೆಯರು ಸ್ತನಪಾನ ಮಾಡಿಸುವುದರ ಬಗ್ಗೆ ಹೆಮ್ಮೆ ಮೂಡಿಸುವ ಚಿತ್ರವನ್ನು ಗೃಹಲಕ್ಷ್ಮಿ ನಿಯತಕಾಲಿಕೆ ಪ್ರಕಟಿಸಿದೆ.  ತಾಯಿಯ ಹಾಲಿನಿಂದ ಆಗುವ ಸಾಕಷ್ಟು ಪ್ರಯೋಜನವನ್ನು ತಿಳಿಸಿಕೊಟ್ಟಿದೆ. ಮಕ್ಕಳಲ್ಲಿ ಅನಾರೋಗ್ಯ ಸೃಷ್ಠಿಸುವ ಇತರೆ ವಸ್ತುಗಳಿಂದ ದೂರವಿಟ್ಟು, ನಿಗದಿತ ವರ್ಷದವರೆಗೂ ತಾಯಿಯ ಹಾಲು ಕುಡಿಸುವುದರಿಂದ ಮಕ್ಕಳು ಸ್ವಸ್ಥವಾಗಿರುತ್ತದೆ. ಈ ಬಗ್ಗೆ ಅರಿವು ಮೂಡಿಸಿದ್ದಕ್ಕಾಗಿ ಗೃಹಲಕ್ಷ್ಮಿಗೆ ಗೌರವ ಸೂಚಿಸಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com