ಇನ್ಮುಂದೆ ಇಂತಹಾ ಪಾತ್ರಗಳಲ್ಲಿ ಎಂದಿಗೂ ನಟಿಸಲ್ಲ ಎಂದ್ರು ನಟಿ ನಿತ್ಯಾ ಮೆನನ್‌…!!?

ಕನ್ನಡ ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಮುದ್ದಾದ ನಗುವಿನಿಂದಲೇ ಅಭಿಮಾನಿಗಳನ್ನು ಹೊಂದಿರುವ ನಟಿ ನಿತ್ಯಾಮೆನನ್‌. ಎಲ್ಲಾ ಸಿನಿಮಾಗಳಲ್ಲೂ ಅವರ ಪಾತ್ರವನ್ನು ನೋಡಿ ಜನ ಮೆಚ್ಚಿದ್ದಾರೆ. ಅಲ್ಲದೆ ಅವರು ಮಾಡಿರುವ ಸಿನಿಮಾಗಳ ಪೈಕಿ 24 ಸಿನಿಮಾಗಳಲ್ಲಿ ನಿತ್ಯಾ ಮೆನನ್ ಸಾವನಪ್ಪಿದ್ದಾರೆ. ಯಾಕೆ ನೀವು ಸಿನಿಮಾಗಳಲ್ಲಿ ಸಾಯುತ್ತೀರಿ ಎಂದು ಸಾಕಷ್ಟು ಅಭಿಮಾನಿಗಳು ನಿತ್ಯಾ ಬಳಿ ಪ್ರಶ್ನೆ ಮಾಡಿದ್ದರಂತೆ. ಅದಕ್ಕಾಗಿ ನಿತ್ಯಾ ಇನ್ಮುಂದೆ ಸಾಯುವ ಪಾತ್ರ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಿತ್ಯಾ ಮೆನನ್‌, ಇನ್ಮುಂದೆ ನನ್ನನ್ನು ಕೊಲ್ಲುವ ಅಥವಾ ಸಾಯುವ ಸೀನ್‌ಗಳಿದ್ದರೆ ಅಂತಹ ಸಿನಿಮಾಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಕಥೆಗೆ ಭಾವನಾತ್ಮಕ ಟಚ್‌ ನೀಡುವ ಸಲುವಾಗಿ ನಿರ್ದೇಶಕರು ಈ ರೀತಿ ಮಾಡಿಸುತ್ತಾರೆ. ಆದರೆ ಇನ್ಮುಂದೆ ಎಂದಿಗೂ ಅಂತಹ ಸಿನಿಮಾಗಳಲ್ಲಿ ಅಭಿನಯಿಸಲು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.