ಜಾನಪದ ಕೋಗಿಲೆ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತೆ ಗೊಲ್ಲರ ತೋಪಮ್ಮ ಇನ್ನಿಲ್ಲ

ಹಿರಿಯೂರು : ಜಾನಪದ ಕೋಗಿಲೆ ಎಂತಲೇ ಹೆಸರುವಾಸಿಯಾಗಿದ್ದ ಹಾಡುಗಾರ್ತಿ ಗೊಲ್ಲರ ತೋಪಮ್ಮ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿದ್ದು, ಅವರಿಗೆ  ಈ ಹಿಂದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗಳು ಲಭ್ಯವಾಗಿತ್ತು.
ಸಾವಿರಾರು ಜಾನಪದ ಹಾಡುಗಳನ್ನು ಹಾಡುತ್ತಿದ್ದ ಇವರು, ಜಾನಪದ ತಜ್ಞ ಪಿ.ಆರ್. ತಿಪ್ಪೇಸ್ವಾಮಿ, ಜಿಶಂ ಪರಮಶಿವಯ್ಯ, ಕ.ರಾ. ಕೃಷ್ಣಸ್ವಾಮಿ ಹಾಗೂ ಇತರರು ಇವರ ಹಾಡುಗಳನ್ನು ಸಂಗ್ರಹಿಸಿದ್ದರು. ಜಾನಪದ ಅಕಾಡೆಮಿ ಇವರ ಜಾನಪದ ಗೀತೆಗಳನ್ನು ಪ್ರಕಟಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com