Deodhar Trophy Final : ಕರ್ನಾಟಕಕ್ಕೆ ನಿರಾಸೆ, ಇಂಡಿಯಾ ‘ಬಿ’ ಮಡಿಲಿಗೆ ಟ್ರೋಫಿ

ಧರ್ಮಶಾಲಾದಲ್ಲಿ ಗುರುವಾರ ನಡೆದ ದೇವಧರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ‘ಬಿ’ ತಂಡ ಕರ್ನಾಟಕದ ವಿರುದ್ಧ 6 ವಿಕೆಟ್ ಜಯ ಗಳಿಸಿದೆ. ವಿಜಯ್ ಹಜಾರೆ ಟ್ರೋಫಿ ಜಯಿಸಿದ್ದ ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ನಿರಾಸೆ ಅನುಭವಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 278 ರನ್ ಮೊತ್ತ ಕಲೆಹಾಕಿತು. ಕರ್ನಾಟಕದ ರವಿಕುಮಾರ್ ಸಮರ್ಥ್ 107, ಸಿಎಂ ಗೌತಮ್ 76, ಶ್ರೇಯಸ್ ಗೋಪಾಲ್ 38 ರನ್ ಗಳಿಸಿದರು. ಇಂಡಿಯಾ ‘ಬಿ’ ತಂದ ಖಲೀಲ್ ಅಹ್ಮದ್ 3, ಉಮೇಶ್ ಯಾದವ್ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಇಂಡಿಯಾ ‘ಬಿ’ ತಂಡ 48.2 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 281 ರನ್ ಸೇರಿಸಿ ಜಯ ಸಾಧಿಸಿತು. ಇಂಡಿಯಾ ‘ಬಿ’ ಪರವಾಗಿ ಅಭಿಮನ್ಯು ಈಶ್ವರನ್, ಶ್ರೇಯಸ್ ಅಯ್ಯರ್, ಮನೋಜ್ ತಿವಾರಿ 59, ರುತುರಾಜ್ ಗಾಯಕ್ವಾಡ್ 58 ರನ್ ಸೇರಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com